×
Ad

ಚಾಮರಾಜನಗರ : ಹುಲಿ ದಾಳಿಗೆ ಹಸು ಬಲಿ

Update: 2026-02-19 12:28 IST

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣ ಗ್ರಾಮದಲ್ಲಿ ಹಾಡಹಗಲೇ ಹುಲಿ ದಾಳಿ ನಡೆಸಿ ಹಸುವೊಂದನ್ನು ಬಲಿ ಪಡೆದ ಘಟನೆ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯಕ್ಕೆ ಸೇರಿದ ಮಾದಪಟ್ಟಣ ಗ್ರಾಮದ ಗುರುಮಲ್ಲಪ್ಪ ಅವರಿಗೆ ಸೇರಿದ ಹಸುವಿನ ಮೇಲೆ ಜಮೀನಿನಲ್ಲಿ ಮೇಯುತ್ತಿದ್ದ ವೇಳೆ ಹುಲಿ ಹಠಾತ್ ದಾಳಿ ನಡೆಸಿದೆ. ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

ಹುಲಿಯನ್ನು ಕಂಡ ರೈತರು ಜೋರಾಗಿ ಕೂಗಿದಾಗ ಗಲಿಬಿಲಿಗೊಂಡ ಹುಲಿಯು ಸಮೀಪದ ಪೊದೆಯೊಳಗೆ ಅಡಗಿ ಕುಳಿತಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇತ್ತೀಚೆಗೆ ವನ್ಯಜೀವಿಗಳ ಉಪಟಳ ಕಡಿಮೆಯಾಗಿದೆ ಎಂದು ನಿರಾಳರಾಗಿದ್ದ ರೈತರು, ಇದೀಗ ಹಗಲಿನಲ್ಲೇ ಜಾನುವಾರು ಬಲಿ ಪಡೆದ ಘಟನೆಗೆ ಆತಂಕಗೊಂಡಿದ್ದಾರೆ. ಹುಲಿಯನ್ನು ತಕ್ಷಣ ಸೆರೆಹಿಡಿಯಬೇಕು ಹಾಗೂ ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News