×
Ad

ಚಾಮರಾಜನಗರ: ಸುಟ್ಟ ಸ್ಥಿತಿಯಲ್ಲಿ ಎರಡು ಬೈಕ್‌ಗಳು ಪತ್ತೆ

Update: 2026-02-26 14:00 IST

ಚಾಮರಾಜನಗರ:  ತಾಲ್ಲೂಕಿನ ಕೋಟಂಬಳ್ಳಿ ಹಾಗೂ ಗೂಳಿಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಉಪ್ಪುಲಿಂಗ ಕಟ್ಟೆಯಲ್ಲಿ ಸುಟ್ಟ ಸ್ಥಿತಿಯಲ್ಲಿರುವ ಎರಡು ಬೈಕ್ ಮತ್ತು ಒಂದು ಗೋಲಕ ಪತ್ತೆಯಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಸುರಿದ ಮಳೆಗೆ ಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿತ್ತು. ಆದರೆ ಈಗ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ, ಕಟ್ಟೆ ಬಳಿಯ ರೈತರು ತಮ್ಮ ಜಮೀನಿಗೆ ನೀರನ್ನು ಮೋಟಾರ್ ಮೂಲಕ ಹರಿಸುತ್ತಿದ್ದಾರೆ. ಈ ವೇಳೆ ಕಟ್ಟೆಯಲ್ಲಿ ಅರ್ಧಭಾಗ ನೀರು ಕಡಿಮೆಯಾಗಿರುವ ಸಂದರ್ಭದಲ್ಲಿ ಬೈಕ್ ಮತ್ತು ಗೋಲಕ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ.

ರೈತರು ಕಾಗಲವಾಡಿ ಉಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಟ್ಟೆಯೊಳಗೆ ಇದ್ದ 2 ಬೈಕ್ ಮತ್ತು 1 ಗೋಲಕವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News