×
Ad

ಚಾಮರಾಜನಗರ: ಕಾಡಾನೆ ದಾಳಿ ತಪ್ಪಿಸುವಾಗ ಬಿದ್ದು ಗಾಯಗೊಂಡ ಅರಣ್ಯ ಇಲಾಖೆಯ ಚಾಲಕ; ಆಸ್ಪತ್ರೆಗೆ ದಾಖಲು

Update: 2024-11-15 11:14 IST

ಚಾಮರಾಜನಗರ:  ಅರಣ್ಯ ಇಲಾಖೆಯ ವಾಹನ ಚಾಲಕರೊಬ್ಬರು ಕಾಡಾನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಬಿದ್ದು ಗಾಯಗೊಂಡಿರುವ ಘಟನೆ ಬಂಡೀಪುರದಲ್ಲಿ ನಡೆದಿದೆ.

ಗಾಯಾಳು ಚಾಲಕನನ್ನು ಗುರುಸ್ವಾಮಿ ಎಂದು ಗುರತಿಸಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದಕೆರೆ ವಲಯದಲ್ಲಿ ಗುರುವಾರ ರಾತ್ರಿ ಗಸ್ತು ತಿರುಗುವ ವೇಳೆ   ಎದುರಿಗೆ ಬಂದ ಕಾಡಾನೆ ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಾಲಕ ಬಿದ್ದು ಗಾಯಗೊಂಡಿದ್ದು, ಕೂದಲೆಳೆಯಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಗಾಯಾಳು ಚಾಲಕ ಗುರುಸ್ವಾಮಿ ಅವರನ್ನು  ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News