×
Ad

ಚಾಮರಾಜನಗರ : ಹೃದಯಾಘಾತದಿಂದ ಸೈನಿಕ ಮೃತ್ಯು; ತವರಿಗೆ ತಲುಪಿದ ಪಾರ್ಥಿವ ಶರೀರ

Update: 2024-08-25 09:35 IST

 ಚಾಮರಾಜನಗರ: ಸೈನಿಕರೊಬ್ಬರು ಕರ್ತವ್ಯದಲ್ಲಿರವಾಗಲೇ ಸೈನಿಕರೊಬ್ಬರು ಪಂಜಾಬ್ ಗಡಿಯಲ್ಲಿ ಸಾವನ್ನಪ್ಪಿದ್ದು, ಅವರ ಪಾರ್ಥೀವ ಶರೀರವನ್ನು ತಡರಾತ್ರಿ ತವರೂರಿಗೆ ಸೈನಿಕರ ಸಹಕಾರದೊಂದಿಗೆ ತರಲಾಗಿದೆ.

ಮೃತ ಯೋಧನನ್ನು ಹನೂರು ತಾಲ್ಲೂಕಿನ ಸೂಳ್ವಾಡಿ ಗ್ರಾಮದ ಜ್ಞಾನ ಪ್ರಕಾಶ್  ಎಂದು ಗುರುತಿಸಲಾಗಿದೆ.  ಇವರು ಪಂಜಾಬ್ ಗಡಿಯಲ್ಲಿ  ಕರ್ತವ್ಯ ನಿರತವಾಗಿರುವಾಗಲೇ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಾವಿನ ಮಾಹಿತಿ ತಿಳಿದ ಕುಟುಂಬಸ್ಥರು ಪಂಜಾಬ್ ಗೆ ತೆರಳಿ, ಮೃತ ದೇಹವನ್ನು ತವರೂರಿಗೆ ತಂದಿದ್ದಾರೆ. ವಿಮಾನ ಮೂಲಕ ಬೆಂಗಳೂರಿಗೆ ತಂದು ಅಲ್ಲಿಂದ ವಾಹನದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸೂಳ್ವಾಡಿಗೆ ತರಲಾಗಿದೆ.

ಮೃತ ಸೈನಿಕ ಜ್ಞಾನ ಪ್ರಕಾಶ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ  ಮನೆಯ ಮುಂದೆ ಇರಿಸಲಾಗಿದೆ.
 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News