×
Ad

ಚಾಮರಾಜನಗರ: ಹುಲಿ ಶವ ಪತ್ತೆ

Update: 2023-12-08 14:57 IST

ಚಾಮರಾಜನಗರ: ಕರ್ನಾಟಕ - ತಮಿಳುನಾಡು ರಾಜ್ಯಗಳ ಗಡಿ  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದ ಪೊದೆಯೊಂದರಲ್ಲಿ ಹುಲಿ ಮತ್ತು ಹುಲಿಮರಿಯ ಶವಗಳು ಪತ್ತೆಯಾಗಿದೆ.

ಪೊದೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ವಾರದ ಹಿಂದೆ ಗುಂಡ್ಲುಪೇಟೆಯ ಪ್ರಾದೇಶಿಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಗುರುವಾರ (ಡಿ 7) ಸಂಜೆ ಹುಲಿಶವಗಳು ಪತ್ತೆಯಾಗಿವೆ. ಶಿಥಿಲಗೊಂಡ ಶವಗಳು ಎರಡರಿಂದ ಮೂರು ವಾರಗಳ ಹಳೆಯವು ಎಂದು ಹೇಳಲಾಗುತ್ತಿದೆ.

ಮರಣೋತ್ತರ ಪರೀಕ್ಷೆ ನಡೆಸಲು ಬನ್ನೇರುಘಟ್ಟದಿಂದ ಪಶುವೈದ್ಯರನ್ನು ಕರೆಸಲಾಗಿದ್ದು, ಹುಲಿಗಳಿಗೆ ವಿಷ ಹಾಕಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News