ಚಾಮರಾಜನಗರ: ಟಿಪ್ಪರ್, ಕಾರು ಮುಖಾಮುಖಿ ಢಿಕ್ಕಿ; ಕೇರಳ ಮೂಲದ ಇಬ್ಬರು ಮೃತ್ಯು, ಮೂವರು ಗಂಭೀರ
Update: 2025-10-25 12:41 IST
ಚಾಮರಾಜನಗರ : ಟಿಪ್ಪರ್ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾದ ಹಿನ್ನೆಲೆ ಕೇರಳ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಮಾದಾಪಟ್ಟಣ ಗೇಟ್ ಬಳಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಮೈಸೂರು ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಮಾದಪಟ್ಟಣ ಗೇಟ್ ಬಳಿ ಘಟನೆ ನಡೆದಿದ್ದು ಕೇರಳ ಮೂಲದ ಬಶೀರ್ (53) ಹಾಗೂ ನಾಶಿಮಾ ( 43)ರವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮಹಮ್ಮದ್ ರಫಿ (32) ಜಶೀರ (28) ಅಜೀಂ (3) ಗಂಭೀರವಾಗಿ ಗಾಯಗೊಂಡಿದ್ದು ಮೈಸೂರು ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.
ಗುಂಡ್ಲುಪೇಟೆ ಕಡೆಯಿಂದ ಬೇಗೂರು ಕಡೆಗೆ ಹೋಗುವಾಗ ಕರಿಕಲ್ಲು ತುಂಬಿದ ಲಾರಿ ಹಾಗೂ ಕೆ ಎಲ್ 12 ಜಿ 4141 ನೋಂದಣಿಯ ಕಾರಿನ ನಡುವೆ ಭೀಕರ ಅಪಘಾತ ನಡೆದಿದೆ.
ಅಪಘಾತ ಸಂಭವಿಸಿದ ಕೂಡಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಬೇಗೂರು ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.