×
Ad

Gundlupete | ಕುರಿಗಾಹಿ ಮೇಲೆ ಹುಲಿ ದಾಳಿ : ಆಸ್ಪತ್ರೆಗೆ ದಾಖಲು

Update: 2026-06-01 15:45 IST

ಸಾಂದರ್ಭಿಕ ಚಿತ್ರ | Image by vladimircech on Magnific

ಚಾಮರಾಜನಗರ : ಕಾಡಿನಂಚಿನಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಯ ಮೇಲೆ ಹುಲಿಯೊಂದು ಹಠಾತ್ತಾಗಿ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಣಗಳ್ಳಿಕಾಲೋನಿ (ಗೋಪಾಲಪುರ) ಬಳಿ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಅಂಚಿನಲ್ಲಿರುವ ಕುಣಗಳ್ಳಿ ಕಾಲೋನಿಯ ಬಳಿ ನೂರಾಳು ಎಂಬ ಕುರಿಗಾಹಿಯೊಬ್ಬರು ಕುರಿ ಮೇಯಿಸುತ್ತಿರುವಾಗ ಹುಲಿಯೊಂದು ಹಠತ್ತಾಗಿ ದಾಳಿ ನಡೆಸಿದಾಗ ಅವರ ಎಡ ಕಾಲು ಮತ್ತು ಕೈಗೆ ಗಾಯವಾಗಿದೆ.

ಹುಲಿ ದಾಳಿಯಿಂದ ವಿಚಲಿತಗೊಂಡ ನೂರಾಳು ಕಾಪಾಡಿ ಎಂದು ಜೋರಾಗಿ ಕೂಗಿಕೊಂಡಾಗ ಹುಲಿ ಅಲ್ಲಿಂದ ಓಡಿ ಹೋಯಿತು. ಈ ವಿಷಯ ತಿಳಿದ ಜಿ.ಎಸ್. ಬೆಟ್ಟ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಅವರು ಸಿಬ್ಬಂದಿಗಳೊಂದಿಗೆ ಆಗಮಿಸಿ, ಗಾಯಾಳು ನೂರಾಳು ವನ್ನು ಗುಂಡ್ಲುಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News