×
Ad

ಹನೂರು | ಸಿಡಿಮದ್ದು ಸಿಡಿದು ಎರಡು ಹಸುಗಳಿಗೆ ಗಂಭೀರ ಗಾಯ

Update: 2024-08-20 11:56 IST

ಹನೂರು : ಸಿಡಿಮದ್ದು ಸಿಡಿದು ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜರುಗಿದೆ

ಕೌದಳ್ಳಿ ಗ್ರಾಮದ ರೈತ ಮಹಿಳೆ ಅಕ್ಕಮ್ಮ ಎಂಬುವವರಿಗೆ ಸೇರಿದ ಹಸುಗಳು, ಕಿಡೆಗೇಡಿಗಳು ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದು ಸಿಡಿದು ಗಂಭೀರವಾಗಿ ಗಾಯಗೊಂಡಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಿಗ್ಗೆ ಎಂದಿನಂತೆ ಜಮೀನಿನ ಸಮೀಪ ಮೇವು ಅರಸಿ ತೆರಳಿದ್ದ ಹಸುಗಳು ಮೇವಿಗೆ ಬಾಯಿ ಹಾಕುತ್ತಿದ್ದಂತೆ ಸಿಡಿಮದ್ದು ಸಿಡಿದು ಹಸುಗಳ ಮುಖ ಹಾಗೂ ದೇಹ ಭಾಗಗಳಿಗೆ ಗಂಭೀರವಾದ ಗಾಯವಾಗಿ‌ದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ರಾಮಾಪುರ ಪೋಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ‌ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News