×
Ad

ಹನೂರು: ದೇವಾಲಯದ ಹುಂಡಿ ಹಣ ಕಳವು

Update: 2025-09-02 12:29 IST

ಚಾಮರಾಜನಗರ : ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ದೊಡ್ಡಲ್ಲತ್ತೂರು ಮಾರಮ್ಮ ದೇವಾಲಯದಲ್ಲಿ ಕಳ್ಳತನ ನಡೆದ ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಹನೂರು ತಾಲ್ಲೂಕಿನ ದೊಡ್ಡಲ್ಲತ್ತೂರು ಗ್ರಾಮದ ಮಾರಮ್ಮ ದೇವಾಲಯದ ಬೀಗ  ಒಡೆದು ಒಳ ಪ್ರವೇಶಿಸಿದ ದುಷ್ಕರ್ಮಿಗಳು, ದೇವಾಲಯದ ಒಳಗೆ ಇದ್ದ ಎರಡು ಹುಂಡಿಗಳನ್ನು ಮುರಿದು,  ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಕಳ್ಳರು ದೋಚಿದ ಹಣದ ಪ್ರಮಾಣ ಇನ್ನೂ ಖಚಿತವಾಗಿಲ್ಲ. ದೋಚಿದ ಬಳಿಕ ಹುಂಡಿಗಳು ದೇವಾಲಯದ ಮುಂಭಾಗದ ರಸ್ತೆಯಲ್ಲಿ ಬಿಸಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಾಹಿತಿ ದೊರೆತ ತಕ್ಷಣ ರಾಮಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News