×
Ad

ʼಕರಿಮಣಿ ಮಾಲಿಕ ನೀನಲ್ಲʼ ರೀಲ್ಸ್ ಮಾಡಿದ ಪತ್ನಿ; ಪತಿ ಆತ್ಮಹತ್ಯೆ

Update: 2024-02-15 19:36 IST

ಸಾಂದರ್ಭಿಕ ಚಿತ್ರ (credit: thesequence.co.uk)

ಚಾಮರಾಜನಗರ: ಪತ್ನಿ ಮಾಡಿದ ʼಕರಿಮಣಿ ಮಾಲಿಕ ನೀನಲ್ಲʼ ರೀಲ್ಸ್ ಗೆ ನೊಂದ ಪತಿಯೊಬ್ಬ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ಮೃತಪಟ್ಟವರು. ಮೃತ ಕುಮಾರ್ ಅವರ ಸಹೋದರ ಮಹಾದೇವಸ್ವಾಮಿ ಮೃತ ಕುಮಾರ್ ಪತ್ನಿ ರೂಪಾ, ರೂಪಾಳ ಸೋದರ ಮಾವ ಗೋವಿಂದ ವಿರುದ್ಧ ದೂರು ಕೊಟ್ಟು ಆಗ್ರಹಿಸಿದ್ದಾರೆ.

ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲಿಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಸ್ನೇಹಿತರು ಕುಮಾರ್ ನ ಗಮನಕ್ಕೆ ತಂದ ವೇಳೆ ದಂಪತಿ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮನನೊಂದ ಪತಿ ಕುಮಾರ್ ಮನೆ ಮುಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News