ಗುಡಿಬಂಡೆ | ಚಿನ್ನಸೇರಿದಂತೆ ಇನ್ನಿತರ ಖನಿಜಗಳಿಗಾಗಿ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ
Update: 2026-02-03 00:13 IST
ಗುಡಿಬಂಡೆ : ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯ ಕೆಲ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನಕ್ಕಾಗಿ ಶೋಧ ಕಾರ್ಯವು ಸತತವಾಗಿ ಮೂರು ನಾಲ್ಕು ದಿನಗಳಿಂದ ನಡೆಯುತ್ತಿದೆ ಎನ್ನುವಂತಹ ಶಂಕೆ ಸಾರ್ವಜನಿಕರಲ್ಲಿ ಮೂಡಿರುವುದು ವರದಿಯಾಗಿದೆ.
ಬೀಚಗಾನಹಳ್ಳಿ ಕ್ರಾಸ್ ಬಳಿ ಇರುವಂತಹ ಆದರ್ಶ ಶಾಲೆಯ ಆವರಣದ ಆಟದ ಮೈದಾನದಲ್ಲಿ ಹೆಲಿಕಾಪ್ಟರ್‌ನ್ನು ನಿಲ್ಲಿಸಿಕೊಂಡು ಅದರ ಮೂಲಕ ಚಿನ್ನ ಸೇರಿದಂತೆ ಇನ್ನಿತರ ಇಂಧನದ ರೂಪದ ವಸ್ತುಗಳಿಗೆ ಶೋಧ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ಚರ್ಚೆಗಳು ಆಗುತ್ತಿವೆ.
ಕೇಂದ್ರ ಸರಕಾರದ ಜಿಯಾಲಜಿಕಲ್ ಆಫ್ ಸರ್ವೇ ಇಲಾಖೆಯ ಆದೇಶದಂತೆ ಪ್ರಕೃತಿಯಲ್ಲಿ ಸಿಗುವಂತಹ ಖನಿಜ ಸಂಪನ್ಮೂಲಗಳಿಗಾಗಿ ಶೋಧ ಕಾರ್ಯವನ್ನು ಹೊಸ ತಂತ್ರಜ್ಞಾನ ಮೂಲಕ ಶೋಧ ಕಾರ್ಯ ಮಾಡುತ್ತಿದ್ದಾರೆ. ಇನ್ನೂ 20 ದಿನಗಳು ಗುಡಿಬಂಡೆ ತಾಲೂಕಿನಲ್ಲಿ ಶೋಧ ಕಾರ್ಯವು ನಡೆಯಲಿದೆ.
ಸಿಗ್ಬತ್‌ವುಲ್ಲಾ, ತಹಶೀಲ್ದಾರ್, ಗುಡಿಬಂಡೆ