×
Ad

ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿಗೆ ಸಿ.ಟಿ.ರವಿ ಅಧ್ಯಕ್ಷ, ದಿನೇಶ್ ಹೊಸೂರು ಉಪಾಧ್ಯಕ್ಷರಾಗಿ ಆಯ್ಕೆ

Update: 2026-02-02 01:02 IST

ಚಿಕ್ಕಮಗಳೂರು : ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪದ ಎಚ್‌. ಕೆ.ದಿನೇಶ್ ಹೊಸೂರು ರವಿವಾರ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಈ ವೇಳೆ ನೂತನ ಅಧ್ಯಕ್ಷ ಸಿ.ಟಿ.ರವಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೊಪ್ಪದ ಎಚ್.ಕೆ.ದಿನೇಶ್ ಮಾತನಾಡಿ, ತಮ್ಮ ಆಯ್ಕೆಗೆ ಸಹಕರಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ನಿರ್ದೇಶಕ ಎಸ್.ಎಲ್.ಭೋಜೇಗೌಡ, ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಹಳಸೆ ಶಿವಣ್ಣ, ಎಸ್.ವಿ.ಬಸವರಾಜಪ್ಪ ಎಸ್‌.ಡಿ.ಸೋನಾಲ್, ಬಿ.ಎಸ್.ಸತೀಶ್, ಕೆ.ಆರ್.ಆನಂದಪ್ಪ ಟಿ.ಎಲ್.ರಮೇಶ್, ಎಚ್.ಕೆ.ದಿನೇಶ್ ಹೆಗ್ಡೆ ಜೈಪಾಲ್ ಕೆ.ಸಿ., ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮುಖಂಡರಾದ ಕಲ್ಕುರುಡಪ್ಪ ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News