×
Ad

ಮೂಡಿಗೆರೆ: ಭಾರಿ ಗಾಳಿ-ಮಳೆಗೆ ಮನೆ ಪಕ್ಕದ ಧರೆ ಕುಸಿತ; ಆತಂಕದಲ್ಲಿ ಕುಟುಂಬ

Update: 2026-07-07 14:26 IST

ಚಿಕ್ಕಮಗಳೂರು, ಜು. 8: ಭಾರಿ ಗಾಳಿ-ಮಳೆಗೆ ಮನೆಯೊಂದರ ಪಕ್ಕದ ಧರೆ ಕುಸಿದ ಘಟನೆ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ನಡೆದಿದೆ.

ದೇವನಗೂಲ್ ಗ್ರಾಮದ ಇಂದಿರಮ್ಮ ಅವರಿಗೆ ಸೇರಿದ ಮನೆಯ ಪಕ್ಕದಲ್ಲಿ ಭೂ ಕುಸಿತ ಸಂಭವಿಸಿದ್ದು, ನಿರಂತರ ಮಳೆಯಿಂದ ಧರೆ ಮತ್ತಷ್ಟು ಕುಸಿಯುತ್ತಿರುವ ಕಾರಣ ಕುಟುಂಬದವರು ಆತಂಕದಲ್ಲಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ಕಳೆದ ಮೂರು ದಿನಗಳಲ್ಲಿ 25 ಇಂಚಿಗೂ ಅಧಿಕ ಮಳೆ ದಾಖಲಾಗಿದ್ದು, ಜನವರಿಯಿಂದ ಈವರೆಗೆ ಸುಮಾರು 60ರಿಂದ 70 ಇಂಚು ಮಳೆಯಾಗಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ತಪ್ಪಲಿನ ಗ್ರಾಮಗಳಲ್ಲಿ ಭೂಕುಸಿತದ ಭೀತಿ ಹೆಚ್ಚಿದೆ.

ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News