×
Ad

ಚಿತ್ರದುರ್ಗ: ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ: ಆರೋಪ

Update: 2023-09-28 11:30 IST

ಚಿತ್ರದುರ್ಗ, ಸೆ.28: ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿಯಲ್ಲಿಂದ ವರದಿಯಾಗಿದೆ.

ಎನ್.ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಇಬ್ಬರೂ ವಾಕ್, ಶ್ರವಣ ದೋಷ ಹೊಂದಿದ್ದು, ಇವರು 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇದೀಗ ಸಾವಿತ್ರಮ್ಮ ಪತಿ ಮಣಿಕಂಠ ಜೊತೆ ಎನ್.ದೇವರಹಳ್ಳಿಯಲ್ಲಿರುವ ತವರು ಮನೆ ಬಂದಿದ್ದಾರೆ. ಈ ವೇಳೆ ಗ್ರಾಮದ ಜೋಗಿ ಜನಾಂಗದ ಮುಖಂಡರು ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಇವರಿಗೆ 30,000 ಸಾವಿರ ರೂ. ದಂಡ ವಿಧಿಸಿದಲ್ಲದೇ, ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿರುವ ಸಾವಿತ್ರಮ್ಮರನ್ನು ಬಾಣಂತಿ ಎಂದೂ ಪರಿಗಣಿಸದೆ ಮನೆಬಿಟ್ಟು ಹೊಗುವಂತೆ ಒತ್ತಡ ಹಾಕಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ದಂಪತಿ ಇದೀಗ ಮತ್ತೆ ಬೆಂಗಳೂರಿಗೆ ತೆರಳಿದೆ ಎಂದು ತಿಳಿದಬಂದಿದೆ.


ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://whatsapp.com/channel/0029VaA8ju86LwHn9OQpEq28  ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News