×
Ad

Mumbai | ಆಸ್ಪತ್ರೆಯಲ್ಲಿ ಪಾಪರಾಝಿಗಳ ವರ್ತನೆಗೆ ಸಲ್ಮಾನ್ ಖಾನ್ ಆಕ್ರೋಶ

‘60 ಸಾಲ್ ಕಾ ಹೋ ಗಯಾ ಹೂಂ, ಲೇಕಿನ್ ಲಡ್ನಾ ನಹೀಂ ಭೂಲಾ’ ಎಂದು ಪೋಸ್ಟ್

Update: 2026-05-20 10:37 IST

Photo| NDTV

ಮುಂಬೈ: ಮುಂಬೈನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದ ವೇಳೆ ಪಾಪರಾಝಿಗಳು ಹಿಂಬಾಲಿಸಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವೈರಲ್ ವಿಡಿಯೊಗಳಲ್ಲಿ, ಆಸ್ಪತ್ರೆಯಿಂದ ಹೊರಬರುತ್ತಿದ್ದ ಸಲ್ಮಾನ್ ಖಾನ್ ಅವರನ್ನು ಛಾಯಾಗ್ರಾಹಕರ ಗುಂಪೊಂದು ಸುತ್ತುವರಿದು ಅವರ ಹೆಸರನ್ನು ಕೂಗುತ್ತಿರುವುದು ಕಾಣಿಸಿದೆ. ಈ ವೇಳೆ ಅಸಮಾಧಾನಗೊಂಡಂತೆ ಕಂಡ ನಟ ಕೈ ಸನ್ನೆಗಳ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿ, ಪಾಪರಾಝಿಗಳ ವರ್ತನೆ ಬಗ್ಗೆ ಪ್ರಶ್ನಿಸಿದ್ದಾರೆ.

ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿದ ಸಲ್ಮಾನ್, ಪತ್ರಿಕಾ ವಲಯದವರೊಂದಿಗೆ ತಾವು ಸದಾ ಸಹಕಾರದಿಂದ ನಡೆದುಕೊಂಡಿರುವುದಾಗಿ ಹೇಳಿದ್ದಾರೆ.

“ಆಸ್ಪತ್ರೆಯಲ್ಲಿ ನನ್ನ ನೋವನ್ನು ಕೆಲವರು ಆನಂದಿಸುತ್ತಿರುವಂತೆ ಕಂಡಿತು. ನಾನು ಯಾವಾಗಲೂ ಮಾಧ್ಯಮದವರೊಂದಿಗೆ ಸಂವಹನ ನಡೆಸಿ, ಕಾಳಜಿ ವಹಿಸಿ, ಅವರ ಜೀವನೋಪಾಯಕ್ಕೂ ಬೆಂಬಲ ನೀಡಲು ಪ್ರಯತ್ನಿಸಿದ್ದೇನೆ” ಎಂದು ಅವರು ಬರೆದಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, “60 ಸಾಲ್ ಕಾ ಹೋ ಗಯಾ ಹೂಂ, ಲೇಕಿನ್ ಲಡ್ನಾ ನಹೀಂ ಭೂಲಾ” ಎಂದು ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಸಲ್ಮಾನ್ ಖಾನ್ ಅವರ ಗೌಪ್ಯತೆಯನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಸಾರ್ವಜನಿಕ ವ್ಯಕ್ತಿಗಳ ಜೀವನ ಜನರ ಗಮನ ಸೆಳೆಯುವುದು ಸಹಜ ಎಂದು ಪ್ರತಿಕ್ರಿಯಿಸಿದ್ದಾರೆ.

Full View



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News