×
Ad

ಮಂಗಳೂರು: ಸೆ.19ರಂದು ಬದ್ರಿಯಾ‌ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾವೇಶ

Update: 2025-09-16 18:26 IST

ಮಂಗಳೂರು: ಮಂಗಳೂರಿನ ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ರೂಪಿಸುವ ಸಲುವಾಗಿ ಸೆ.19ರಂದು ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಬದ್ರಿಯಾ ಕ್ಯಾಂಪಸ್ಸಿನಲ್ಲಿ ಅಂದು ಸಂಜೆ 4ರಿಂದ 6ರವರೆಗೆ ಸಮಾವೇಶ ನಡೆಯಲಿದೆ. ದೇಶ ವಿದೇಶಗಳಿಂದ ಹಳೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸಮಾವೇಶದಲ್ಲಿ ಬದ್ರಿಯಾ ವಿದ್ಯಾ ಸಂಸ್ಥೆಯ ಸಮಗ್ರ ಅಭಿವೃದ್ಧಿ ಮತ್ತು ವಿವಿಧ ಯೋಜನೆಗಳ ಬಗ್ಗೆ ಪ್ರಮುಖರ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.

1928ರಲ್ಲಿ ಆರಂಭವಾದ ಬದ್ರಿಯಾ ವಿದ್ಯಾಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪಿಸಿದೆ. ಇಲ್ಲಿ ಕೆಜಿಯಿಂದ ಡಿಗ್ರಿವರೆಗೆ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿಗಳಾದ ಮಾಜಿ ಕಾರ್ಪೊರೇಟರ್ ಅಬ್ದುಲ್ ಲತೀಫ್, ಸಂಶುದ್ದೀನ್, ಖಲೀಲ್ ಉರ್ ರೆಹಮಾನ್, ಮುಕ್ತಾರ್ ಅಹ್ಮದ್, ಹಸನ್ ಶಾಹೀದ್, ಮುಹಮ್ಮದ್ ಫಯಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News