×
Ad

ಬೈಕಂಪಾಡಿ : ಪ್ಲೈವುಡ್‌ ಫ್ಯಾಕ್ಟರಿಯಲ್ಲಿ ಬೆಂಕಿ‌ ಆಕಸ್ಮಿಕ; ಅಪಾರ ನಷ್ಟ

Update: 2026-01-05 11:46 IST

ಪಣಂಬೂರು : ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಪ್ಲೈವುಡ್‌ ಫ್ಯಾಕ್ಟರಿಯೊಂದರಲ್ಲಿ ರವಿವಾರ ಬೆಳಗ್ಗೆ ಬೆಂಕಿ ಅವಘಡ‌ ಸಂಭವಿಸಿ‌ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ರಝಾಕ್ ಎಂಬವರಿಗೆ ಸೇರಿದ ಅಕೋಲೈಟ್ ಇಂಡಸ್ಟ್ರಿಯಲ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಎಂಬ ಪ್ಲೈವುಡ್‌ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಕಂಪೆನಿಯಲ್ಲಿದ್ದ ಪ್ಲೈವುಡ್‌ಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 1ಕೋ.ರೂ. ನಷ್ಟ ಸಂಭವಿಸಿದೆ‌ ಎಂದು ಅಂದಾಜಿಸಲಾಗಿದೆ.‌

ಘಟನೆ ಬೆಳಗ್ಗಿನ‌ ಜಾವ ನಡೆದಿರುವ ಪರಿಣಾರ ಕೆಲಸಗಾರರು ಯಾರೂ ಇದ್ದಿರಲಿಲ್ಲ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿದ ಕೂಡಲೇ ಪಣಂಬೂರು ಪೊಲೀಸರು ಸ್ಥಳಕ್ಕೆ‌‌ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಸ್ಥಳಕ್ಕೆ ಎಂ.ಸಿ.ಎಫ್, ಎನ್ ಎಂ ಪಿ ಎ ಹಾಗೂ ಅಗ್ನಿಶಾಮಕ‌ದಳದ ನಾಲ್ಕು ಅಗ್ನಿ ಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News