×
Ad

ಬೆಳ್ತಂಗಡಿ | ಪಲ್ಕೆಯಲ್ಲಿ ಎರಡು ಮನೆಗಳಿಂದ ಚಿನ್ನಾಭರಣ ಕಳವು

Update: 2024-05-23 09:42 IST

ಬೆಳ್ತಂಗಡಿ, ಮೇ 23: ತೆಂಕ ಕಾರಂದೂರು ಗ್ರಾಮದ ಪಲ್ಕೆ ಎಂಬಲ್ಲಿ ಕಳೆದ ರಾತ್ರಿ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಕಳ್ಳತನ ನಡೆಸಿರುವ ಘಟನೆ ನಡೆದಿದೆ.

ಪಲ್ಕೆ ನಿವಾಸಿ ವೃದ್ಧೆ ಪ್ರೇಮಾ ಶೆಟ್ಟಿ ಎಂಬವರ ಮನೆಯಲ್ಲಿ ಕಳವು ನಡೆದಿದೆ. ತಡರಾತ್ರಿ ಹಿಂಬದಿ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕೋಣೆಯಲ್ಲಿರುವ ಕಪಾಟು ಬಾಗಿಲು ಒಡೆದು ಸುಮಾರು 20 ಪವನ್ ಚಿನ್ನಾಭರಣ ಹಾಗೂ ಇತರ ದಾಖಲೆಗಳಿದ್ದ ಬ್ಯಾಗನ್ನು ಕದ್ದೊಯ್ದಿದ್ದಾರೆ. ಕಪಾಟಿನ ಸಮೀಪವೇ ಮನೆಮಂದಿ ಮಲಗಿದ್ದರೂ ಕಳ್ಳರು ಚಾಣಾಕ್ಷತನದಿಂದ ಕೃತ್ಯ ಎಸಗಿದ್ದಾರೆ.

ಪ್ರೇಮಾ ಅವರ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿ ಎಂಬವರ ಮನೆಯಲ್ಲೂ ಕಳವು ನಡೆದಿದೆ.

ಮನೆಯವರ ಸಂಬಂಧಿಕರ ಮನೆಯಲ್ಲಿ ಭೂತ ಕೋಲ ಇರುವ ಕಾರಣ ಸಂಜೆ ತೆರಳಿದ್ದರು. ಈ ವೇಳೆ ಮನೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿರುವ ಕಳ್ಳರು 4 ಪವನ್ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ವೇಣೂರು ಠಾಣೆ ಉಪನಿರೀಕ್ಷಕ ಶ್ರೀ ಶೈಲ ಹಾಗೂ ತಂಡ ಆಗಮಿಸಿ ತನಿಖೆ ಆರಂಭಿಸಿದೆ.


ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28  ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News