×
Ad

ದೇರಳಕಟ್ಟೆ | ಮಹಿಳೆ ಅಸ್ವಸ್ಥ; ಬಸ್ಸನ್ನು ನೇರ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಬಸ್ ಚಾಲಕ, ನಿರ್ವಾಹಕ

Update: 2024-09-03 21:48 IST

ಕೊಣಾಜೆ: ವಿಟ್ಲದಿಂದ ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ ನಲ್ಲಿ ಅಸ್ವಸ್ಥಗೊಂಡ ಮಹಿಳೆಯೊಬ್ಬರನ್ನು ಬಸ್ ನ ಚಾಲಕ, ನಿರ್ವಾಹಕ ನೇರವಾಗಿ ಬಸ್ಸನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ವಿಟ್ಲದಿಂದ ಮಂಗಳೂರು ಕಡೆಗೆ ಹೊರಟಿದ್ದ ಮೆರ್ಸಿ ಬಸ್ನಲ್ಲಿ ಮಹಿಳೆಯೋರ್ವರು ಮುಡಿಪುಗೆ ಟಿಕೆಟ್ ತೆಗೆದುಕೊಂಡಿದ್ದು, ಬಸ್ಸು ಮುಡಿಪು ಬಸ್ಸು ನಿಲ್ದಾಣಕ್ಕೆ ಬಂದಾಗ ಮಹಿಳೆ ಇಳಿದಿರಲಿಲ್ಲ. ಕೂಡಲೇ ಪ್ರಯಾಣಿಕರೋರ್ವರು ಆ ಮಹಿಳೆ ಅಸ್ವಸ್ಥ ರಾಗಿ ಕುಸಿದು ಬಿದ್ದಿರುವುದನ್ನು ಬಸ್ಸು ನಿರ್ವಾಹಕರಾದ ಯಾಕೂಬ್ ಅವರ ಗಮನಕ್ಕೆ ತಂದಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಯಾಕೂಬ್, ಚಾಲಕ ಸವಾದ್ ರ ಬಳಿ ಬಸ್ಸನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸಲು ಮನವಿ ಮಾಡಿದ್ದು, ಅದರಂತೆ ಚಾಲಕ ಸವಾದ್ ಕಣಚೂರು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಸ್ಸನ್ನು ಚಲಾಯಿಸಿ ನೆರವಾಗಿದ್ದಾರೆ.

ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಘಟನೆಯ ತುಣುಕುಗಳು ಸೆರೆಯಾಗಿವೆ. ಮಹಿಳೆಯು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News