ಫೇಸ್‌ಬುಕ್‌ನಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಕಮೆಂಟ್; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ದೂರು ದಾಖಲು
ಬೆಳ್ತಂಗಡಿ,(ಸೆ.19): ವಾರ್ತಾ ಭಾರತಿಯ ಫೇಸ್‌ಬುಕ್ ಪೋಸ್ಟ್ ನಲ್ಲಿ "ಬೆಳ್ತಂಗಡಿ |ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ; ಮತ್ತೆರಡು ತಲೆ ಬುರುಡೆ ಪತ್ತೆ" ಎಂಬ ಟೈಟಲ್ ನೊಂದಿಗೆ ಬಂದ ವರದಿಗೆ ಪ್ರವಾದಿ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿರುವ ಬಗ್ಗೆ ದೂರು ದಾಖಲಿಸಲಾಗಿದೆ.
ನ್ಯೂಸ್‌ನ ಕಮೆಂಟ್ ಬಾಕ್ಸ್‌ನಲ್ಲಿ "ಸನಾತನಿ ಸಿಂಹ" ಎಂಬ ಖಾತೆಯಿಂದ 'ಒಂದು ಪೈಗಂಬರದು ಇನ್ನೊಂದು ಆಯೇಷಾ ದು' ಎಂದು ಕಾಮೆಂಟ್ ಮಾಡಿದ್ದು, ಅದೇ ಕಮೆಂಟ್ ಬಾಕ್ಸ್ ನಲ್ಲಿ Chetan Hoddetty ಎಂಬಾತ 'ಒಂದು ಪೈಗಂಬರ್ ಇನ್ನೊಂದು ಆಯೇಷಾದು ಇರಬಹುದು' ಎಂದು ಕಮೆಂಟ್ ಹಾಕಿ ಧಾರ್ಮಿಕ ನಿಂದನೆ, ಅಶಾಂತಿ ಸೃಷ್ಟಿ, ಧಾರ್ಮಿಕ ಭಾವನೆ ಕೆರಳಿಸಿ ಕೋಮು ಗಲಭೆ ಮಾಡುವ ಷಡ್ಯಂತ್ರ ಮತ್ತು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕೃತ್ಯವನ್ನು ನಡೆಸಿದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಈ ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರು ನೀಡುವ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಸಮಿತಿ ಸದಸ್ಯ ಅಶ್ರಫ್ ಕಟ್ಟೆ, ಸಲೀಂ ಸುನ್ನತ್ ಕೆರೆ, ಇಮ್ತಿಯಾಝ್ ಜಿ.ಕೆ, ಆರಿಫ್ ಕುಂಟಿನಿ ಉಪಸ್ಥಿತರಿದ್ದರು.