×
Ad

ಧರ್ಮಸ್ಥಳ ದೂರು | ಇಂದು ತಲೆಬುರುಡೆಯ ಸ್ಥಳ ಮಹಜರು ಪ್ರಕ್ರಿಯೆ

Update: 2025-07-28 10:02 IST

ಬೆಳ್ತಂಗಡಿ: ಧರ್ಮಸ್ಥಳ ದೂರು ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಬುರುಡೆ ತೆಗೆದ ಜಾಗದಲ್ಲಿ ಎಸ್.ಐ.ಟಿ ಅಧಿಕಾರಿಗಳು ದೂರುದಾರನ ಜೊತೆ ಜುಲೈ28 ರಂದು ಹೋಗಿ ಸ್ಥಳ ಮಹಜರು ನಡೆಸಲಿದ್ದಾರೆ.

ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು, ಬೆಳ್ತಂಗಡಿ ಎಸ್.ಐ.ಟಿ ಕಚೇರಿಯ ಮುಂದೆ ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಮಹಜರಿಗೆ ತಯಾರಿ ನಡೆಸುತ್ತಿದ್ದಾರೆ.

ಮೊದಲು ಬೆಳ್ತಂಗಡಿ ಕಚೇರಿಗೆ ಬಂದ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಕರೆಸಿಕೊಂಡಿದ್ದು, ಕೆಲವು ದಾಖಲೆಗಳಿಗೆ ದೂರುದಾರ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳದಲ್ಲಿ ಬುರುಡೆ ತೆಗೆದ ಜಾಗಕ್ಕೆ ಹೋಗಿ ಮಹಜರು ನಡೆಸಲಿದ್ದಾರೆ.

ಕಂದಾಯ ಇಲಾಖೆ ,ಸರ್ವೆ ಇಲಾಖೆ, ಐ.ಎಸ್.ಡಿ(ಅಂತರಿಕ ಭದ್ರತಾ ವಿಭಾಗ) ಎಫ್.ಎಸ್.ಲ್ ವಿಭಾಗದ ಸೋಕೋ ಸಿಬ್ಬಂದಿ ,ಅರಣ್ಯ ಇಲಾಖೆ ತಂಡ ಸಜ್ಜಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News