×
Ad

ಧರ್ಮಸ್ಥಳ ದೂರು | ಬೋಳಿಯಾರು ಅರಣ್ಯದಲ್ಲಿ ಪತ್ತೆಯಾಗದ ಕಳೇಬರ; ಎಸ್‌ ಐಟಿ ಕಾರ್ಯಾಚರಣೆ ಸ್ಥಗಿತ

Update: 2025-08-08 18:20 IST

ಬೆಳ್ತಂಗಡಿ, ಆ.8: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿ ದೂರುದಾರನ ಮಾಹಿತಿಯಂತೆ ಬೊಳಿಯಾರು ಸಮೀಪದ ಅರಣ್ಯದಲ್ಲಿ ನಡೆಸುತ್ತಿದ್ದ ಇಂದಿನ ಕಾರ್ಯಾಚರಣೆಯನ್ನು ಎಸ್ ಐಟಿ ತಂಡ ಸ್ಥಗಿತಗೊಳಿಸಿದ್ದು, ಕಾರ್ಯಾಚರಣೆಯಲ್ಲಿ ಯಾವುದೇ ಕಳೇಬರಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಶುಕ್ರವಾರ ಮಧ್ಯಾಹ್ನ ಎಸ್ ಐಟಿ ಅಧಿಕಾರಿಗಳು ಬೊಳಿಯಾರು ಅರಣ್ಯಕ್ಕೆ ಅಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಹಿಟಾಚಿಯನ್ನು ಬಳಸಿಕೊಂಡು ಕಾರ್ಮಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತು. ಆದರೆ ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News