×
Ad

ಅಬುಧಾಬಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬ್ದುಲ್ಲಾ ಮಾದುಮೂಲೆಗೆ ಮುಈನುಸುನ್ನಾದಿಂದ ಸನ್ಮಾನ

Update: 2023-11-07 21:03 IST

ಅಬುಧಾಬಿ: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅನಿವಾಸಿ ಕನ್ನಡಿಗ ಅಬ್ದುಲ್ಲಾ ಮಾದುಮೂಲೆ ಅವರನ್ನು ಹಾವೇರಿಯ ಮುಈನುಸುನ್ನಾ ಅಬುಧಾಬಿ ಘಟಕದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಅಧ್ಯಕ್ಷ ಸೈಯದ್ ಶಹೀರ್ ಅಲ್‌ ಬುಖಾರಿ ಪೊಸೋಟ್ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು. 

ಮುಈನುಸುನ್ನ ಸ್ಥಾಪಕ ನಿರ್ದೇಶಕ ಕೆ.ಎಂ.ಮುಸ್ತಫ ನಈಮಿ ಅಲ್ ಹಿಮಮಿ ಹಾವೇರಿ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ನಾಯಕರಾದ ಅಬ್ದುಲ್ ಹಮೀದ್ ಸಅದಿ, ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಕೆಸಿಎಫ್ ಅಬುಧಾಬಿ ಘಟಕದ ಪ್ರಧಾನ ಕಾರ್ಯದರ್ಶಿ ಕಬೀರ್ ಬಾಯಂಪಾಡಿ ಮಾತನಾಡಿದರು.

ಮುಈನುಸುನ್ನಾ ಅಬುಧಾಬಿ ಘಟಕದ ಅಧ್ಯಕ್ಷ ಇಕ್ಬಾಲ್ ಕುಂದಾಪುರ, ಯುಎಇ ರಾಷ್ಟ್ರೀಯ ಸಮಿತಿಯ ನಾಯಕರುಗಳಾದ ಮುಹಮ್ಮದ್ ಕುಂಞಿ ಹಾಜಿ ಅಡ್ಕ, ನವಾಝ್ ಹಾಜಿ ಕೋಟೆಕಾರ್, ಬ್ರೈಟ್ ಇಬ್ರಾಹೀಂ ಹಾಜಿ, ಮುಹಮ್ಮದ್ ಅಲಿ ವಳವೂರು, ಕೆ.ಎಚ್.ಮುಹಮ್ಮದ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.

ಹಸೈನಾರ್ ಅಮಾನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕೆ.ಸಿ.ರೋಡ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News