ನ.15ರಂದು ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ‘ಎಕ್ಸ್‌ಪ್ಲೋರಿಯಾ’ ಶೈಕ್ಷಣಿಕ ಉತ್ಸವ
ಮಂಗಳೂರು, ನ.11: ಬರಕಾ ಇಂಟರ್‌ನ್ಯಾಶನಲ್ ಶಾಲೆ ಮತ್ತು ಕಾಲೇಜು ವತಿಯಿಂದ ‘ಎಕ್ಸ್‌ಪ್ಲೋರಿಯಾ’ ಶೈಕ್ಷಣಿಕ ಉತ್ಸವ ನ.15ರಂದು ಬೆಳಗ್ಗೆ 9:30ರಿಂದ ಸಂಜೆ 4:30ರ ತನಕ ಮಂಗಳೂರಿನ ಅಡ್ಯಾರ್‌ನಲ್ಲಿರುವ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಬರಕಾ ಇಂಟರ್‌ನ್ಯಾಶನಲ್ ಶಾಲೆಯ ಪ್ರಾಂಶುಪಾಲ ಶರ್ಫುದ್ದೀನ್ ಬಿ.ಎಸ್. ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಜ್ಞಾನ, ಪರಿಸರ, ಇಸ್ಲಾಮಿಕ್ ಅಧ್ಯಯನ ಮತ್ತು ಇನ್ನೂ ಹಲವು ವಿಷಯಗಳನ್ನು ಪ್ರದರ್ಶಿಸುವ ಆಕರ್ಷಕ ಪ್ರದರ್ಶನಗಳು, ಚಟುವಟಿಕೆಗಳು ಮತ್ತು ಸ್ಟಾಲ್‌ಗಳನ್ನೊಳಗೊಂಡಿದೆ. ಎಕ್ಸ್ ಪ್ಲೋರಿಯಾ ಬರಕಾ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಮತ್ತು ಸೃಜನಾತ್ಮಕ ಸಾಮರ್ಥ್ಯಗಳನ್ನು ಬಳಸಿಕೊಂಡು ವಿವಿಧ ಕಲ್ಪನೆಗಳು ಮತ್ತು ಮಾದರಿಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ವಿವರಿಸಿದರು.
ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬರಕಾ ಪೋಷಕರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಎಲ್ಲಿರಿಗೂ ಉಚಿತ ಪ್ರವೇಶ ಇದೆ. ಮಂಗಳೂರಿನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಕಾಲೇಜು, ಸಮಗ್ರ ಶಿಕ್ಷಣ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಬದ್ಧವಾಗಿರುವುದಕ್ಕೆ ಹೆಚ್ಚು ಖ್ಯಾತಿಯನ್ನು ಪಡೆದಿದೆ. ಪ್ರೀ-ಕೆಜಿಯಿಂದ ಡಿಗ್ರಿ ಮಟ್ಟದವರೆಗೆ ವಿವಿಧ ಕಾರ್ಯಕ್ರಮಗಳನ್ನು ನೀಡುವ ಬರಕಾ, ವಿದ್ಯಾರ್ಥಿಗಳ ಭವಿಷ್ಯದ ಯಶಸ್ಸಿಗೆ ಬಲವಾದ ಆಧಾರವನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂಸ್ಥೆಯು ವಿಶೇಷವಾಗಿ ನೀಟ್ ಇಂಟಿಗ್ರೇಟೆಡ್ ಮತ್ತು ನೀಟ್ ದೀರ್ಘಾವಧಿ ಕೋರ್ಸ್‌ಗಳಿಗೆ ಹೆಸರುವಾಸಿಯಾಗಿದೆ, ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಶರ್ಫುದ್ದೀನ್ ಬಿ.ಎಸ್. ವಿವರಿಸಿದರು.
ಹಿಂದಿನ ವರ್ಷ ಬರಕಾ ನೀಟ್ ಅಕಾಡೆಮಿಯ ಅತ್ಯುತ್ತಮ ಪ್ರದರ್ಶನವು ಬಹಳಷ್ಟು ವಿದ್ಯಾರ್ಥಿಗಳು ಸರಕಾರಿ ಕೋಟಾದಡಿ ಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆದಿದ್ದಾರೆ, ಇದು ಅದರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು.
ಶೈಕ್ಷಣಿಕ ಉತ್ಕೃಷ್ಟತೆಯ ಜೊತೆಗೆ ಬರಕಾ ಸಂಸ್ಥೆಯು ಅರೇಬಿಕ್, ಕುರ್ ಆನ್ ಕಂಠಪಾಠ ಮತ್ತು ಇಸ್ಲಾಮಿಕ್ ಸ್ಟಡೀಸ್‌ಗಳಿಗೆ ಒತ್ತು ನೀಡುತ್ತದೆ, ಇವುಗಳ ಅಧ್ಯಯನ ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.ಈ ಸಮಗ್ರ ವಿಧಾನವು ವಿದ್ಯಾರ್ಥಿಗಳು ಬೌದ್ಧಿಕವಾಗಿ ಆಧ್ಯಾತ್ಮಿಕವಾಗಿ ಮತ್ತು ನೈತಿಕವಾಗಿ ಬೆಳೆಯುವುದನ್ನು ಖಾತ್ರಿ ಪಡಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಸ್ಲಾಮಿಕ್ ಅಧ್ಯಯನ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಹನೀಫ್ ಬೋಳಂತೂರು, ಉಪಪ್ರಾಂಶುಪಾಲ ಸೌಸ್ರೀನ್ ಕಾಸಿಮ್, ಜನರಲ್ ಮ್ಯಾನೇಜರ್ ಶಮೀರ್ , ಪಿಯು ವಿಭಾಗದ ಅಕಾಡೆಮಿಕ್ ಡೈರೆಕ್ಟರ್ ಲಂಕೇಶ್ , ಪಿ.ಯು.ವಿಭಾಗದ ಸಂಯೋಜಕರಾದ ಶಾಝಿಯಾ , ಪ್ರಾಥಮಿಕ ವಿಭಾಗದ ಸಂಯೋಜಕರಾದ ಝಾಹಿದಾ, ಟ್ರಾನ್ಸ್‌ಪೊರ್ಟ್ ಮ್ಯಾನೇಜರ್ ಹಂಝ ಉಪಸ್ಥಿತರಿದ್ದರು.