×
Ad

ಹಿದಾಯ ಫೌಂಡೇಶನ್ ಮಂಗಳೂರು: 15ನೇ ಗ್ಲೋಬಲ್ ಮೀಟ್

Update: 2025-07-25 23:19 IST

ಮಂಗಳೂರು: ಹಿದಾಯ ಫೌಂಡೇಶನ್ ಮಂಗಳೂರು ಇದರ 15ನೇ ಗ್ಲೋಬಲ್ ಮೀಟ್ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮೌಲಾನಾ ಶುಹೈಬ್ ಎಚ್. ನದ್ವಿ ಹಿತ ವಚನ ನೀಡಿದರು. ಹಿದಾಯ ವಾರ್ಷಿಕ ಚಟುವಟಿಕೆಗಳ ಮ್ಯಾಗಝೀನ್ ಬಿಡುಗಡೆಯನ್ನು ಚೇರ್ಮೆನ್ ಝಕರಿಯಾ ಜೋಕಟ್ಟೆ ನೆರವೇರಿಸಿದರು. ವಾರ್ಷಿಕ ವರದಿಯನ್ನು ಅಬ್ದುಲ್ ರಝಾಕ್ ಎ. ಮಂಡಿಸಿದರು. ಸಲೀಮ್ ಯು.ಬಿ. ಹೆಲ್ತ್‌ಕೇರ್ ವರದಿ ಮಂಡಿಸಿದರು.

ಹಣಕಾಸು ವರದಿಗಳು ಮತ್ತು ಬಜೆಟ್ ಅನ್ನು ಅಬ್ಬಾಸ್ ಉಚಿಲ್ ಮಂಡಿಸಿ ಅನುಮೋದನೆ ಪಡೆದುಕೊಂಡರು. ಆಡಳಿತಾಧಿಕಾರಿ ಅಬಿದ್ ಅಸ್ಗರ್ ಅವರು ಬಜೆಟ್ ಪೂರ್ವಾನುಮಾನ ನೀಡಿದರು. ಸ್ಥಾಪಕ ಅಧ್ಯಕ್ಷ ಖಾಸಿಂ ಅಹ್ಮದ್ ಅವರು "ಎಪಿಸೆಂಟರ್ ಆಪರೇಷನಲ್ ಫ್ರೇಮ್‌ವರ್ಕ್" ವಿಷಯವನ್ನು ವಿವರಿಸಿದರು ಮತ್ತು ಸಂಶೋದನೆ ಮತ್ತು ಸಹಯೋಗದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಯೆನೆಪೋಯ ಸಂಸ್ಥೆಯ ಫರಾದ್‌ ಯೆನೆಪೋಯ, ಡಾ. ಹಬೀಬುರ್ ರಹ್ಮಾನ್, ಎಂಜಿನಿಯರ್ ಪ್ರಮುಖ್ ರೈ, ರೊನಾಲ್ಡ್ ಮಾರ್ಟೀಸ್ ದುಬೈ, ಹನೀಫ್ ಹುದವಿ ಪುತ್ತೂರು, ಜೆಬಿ ಅಬ್ದುಲ್ ರಕ್ವಾನ್ ಅಲ್ ಖೋಬರ್, ಅಬ್ದುಲ್ ಸಲಾಂ, ಅಬ್ದುಲ್‌ ಸಲೀಮ್‌ ದುಬೈ ಟೆಸ್ಕಾನ್ ಗ್ಲೋಬಲ್, ಯೂನುಸ್ ಹಸನ್ ಜುಬೈಲ್, ಜೆಬಿ ಅಬ್ದುಲ್ ಸಲಾಂ ಪುತ್ತಿಗೆ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಪಾಧ್ಯಕ್ಷ ರಿಯಾಝ್ ಬಾವ, ಕೋಶಾಧಿಕಾರಿ ಶರೀಫ್ ವೈಟ್‌ಸ್ಟೋನ್, ಟ್ರಸ್ಟ್ ಎಕ್ಸಿಕ್ಯೂಟಿವ್ ಸದಸ್ಯರು: ಝಿಯಾವುದ್ದೀನ್ ಅಹ್ಮದ್, ಆಸಿಫ್ ಸೂಫಿಕಾನ, ಯುಬಿ ಸಲೀಮ್, ಮಕ್ಬೂಲ್ ಅಹ್ಮದ್, ಬಶೀರ್ ಎಫ್‌ಎಂ, ಅಬ್ದುಲ್ಲಾ ಮೋನು, ಇಲ್ಯಾಸ್ ಹುಸೈನ್, ಅಹ್ಮದ್ ಬಾವ, ಶಂಸೀರ್ ಬಾರಿ, ಅನ್ವರ್ ಸಾದಾತ್, ಹಮೀದ್ ಮಠ, ಮಹಿಳಾ ವಿಭಾಗ, ಯುವವಿಂಗ್ಸ್, ಕೇಂದ್ರ ಸಮಿತಿ ಪ್ರಮುಖರು, ಯೋಜನಾ ಪ್ರಮುಖರು ಮತ್ತು ಅನಿವಾಸಿ ಘಟಕಗಳ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿ. ಮೊಹಮ್ಮದ್ ತುಂಬೆ ನಿರೂಪಿಸಿದರು. ಆಶಿಕ್ ಕುಕ್ಕಾಜೆ ಖಿರಾಅತ್ ಪಟಿಸಿದರು. ಕೇಂದ್ರ ಘಟಕದ ಅಧ್ಯಕ್ಷ ಮೊಹಮ್ಮದ್‌ ಹನೀಫ್‌ ಹಾಜಿ ಸ್ವಾಗತಿಸಿದರು. ಅಬ್ಬಾಸ್ ಉಚ್ಚಿಲ್ ವಂದಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News