ಜಲಾಲ್ ಬಾಗ್: ಮಸ್ಜಿದುಲ್ ಅರಫಾ, ಮದ್ರಸತುಲ್ ಅರಫಾ ಆಶ್ರಯದಲ್ಲಿ ಮಜ್ಲಿಸುನ್ನೂರ್ ದ್ವಿತೀಯ ವಾರ್ಷಿಕ
ದೇರಳಕಟ್ಟೆ: ಮಜ್ಲಿಸುನ್ನೂರ್ ಇದರ ದ್ವಿತೀಯ ವಾರ್ಷಿಕ ಕಾರ್ಯಕ್ರಮ ಜಲಾಲ್ ಬಾಗ್ ಮಸ್ಜಿದುಲ್ ಅರಫಾ ಮತ್ತು ಮದರಸತುಲ್ ಅರಫಾ ಇದರ ಆಶ್ರಯದಲ್ಲಿನಡೆಯಿತು.
ಕಾರ್ಯಕ್ರಮದಲ್ಲಿ ದಾರುಸ್ಸಲಾಂ ಎಜ್ಯುಕೇಷನ್ ಸೆಂಟರ್ ಬೆಳ್ತಂಗಡಿ ಇದರ ಅಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ರವರು ದುಆ ಮತ್ತು ನೇತೃತ್ವ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿಯವರು ವಹಿಸಿದ್ದರು.ಸ್ಥಳೀಯ ಖತೀಬರಾದ ಬಹು ಎಮ್.ಕೆ.ಅಬ್ದುಲ್ ರಹ್ಮಾನ್ ಫೈಝಿ ಯವರು ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ದೇರಳಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ತಾಜುದ್ದೀನ್ ರಹ್ಮಾನಿ, ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಇದರ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಅರಫಾ ಮಸೀದಿ ಮಾಜಿ ಖತೀಬ್ ಹಂಝ ಫೈಝಿ, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್, ದೇರಳಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್.ಆರ್. ಅಹ್ಮದ್ ಸೇಟ್, ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದೇರಳಕಟ್ಟೆ ರೇಂಜ್ ಇದರ ಅಧ್ಯಕ್ಷರಾದ ಕೆ.ಅಬೂಬಕ್ಕರ್ ಹಾಜಿ, ಕಿನ್ಯ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಇದರ ಉಪಾಧ್ಯಕ್ಷ ಮಹಮ್ಮದ್ ಹನೀಫ್ ಎಸ್.ಬಿ, ಜತೆ ಕಾರ್ಯದರ್ಶಿ ಬಶೀರ್ ಅಜ್ಜಿನಡ್ಕ, ಅಡ್ಯಾರ್ ಕಣ್ಣೂರ್ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರ್, ಸ್ಥಳೀಯ ಉದ್ಯಮಿಗಳಾದ ಪಿ.ಎಮ್ ಇಬ್ರಾಹಿಮ್ ಕತಾರ್, ಡಿ.ಎಸ್ ರಫೀಕ್, ತಾಜುದ್ದೀನ್ ದೇರಳಕಟ್ಟೆ, ಅಶ್ರಫ್ ಬಿ.ಎಚ್ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ ಮದರಸ ಮೇಲ್ವಿಚಾರಕ ಅಬ್ದುಲ್ ಲತೀಫ್ ಜಲಾಲ್ ಬಾಗ್ ಮುಖ್ಯಾತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಸೀದಿ ಮುಅಝ್ಝಿನ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಮದರಸ ಮುಅಲ್ಲಿಮ್ ಫಾರೂಕ್ ಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷ ಮಹಮ್ಮದ್ ಹನೀಫ್, ಕೋಶಾಧಿಕಾರಿ ಮಹಮ್ಮದ್ ಫಾರೂಕ್ , ಆಡಳಿತ ಸಮಿತಿ ಸದಸ್ಯರುಗಳಾದ ಹಮೀದ್ ಪಜೀರ್ , ಅಬ್ದುಲ್ ರಹ್ಮಾನ್ ಹಾಜಿ, ಹಮೀದ್ ಡ್ರೈವರ್ ಮತ್ತಿತರರು ಉಪಸ್ಥಿತರಿದ್ದರು.
ಜಮಾಅತಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ಸ್ವಾಗತಿಸಿ, ಮಜ್ಲಿಸ್ ನ್ನೂರ್ ಸಂಚಾಲಕರಾದ ಮಹಮ್ಮದ್ ಅಲಿ ಹಾಜಿ ವಂದಿಸಿದರು.