×
Ad

ಮಂಗಳೂರು ವಿಮಾನ ನಿಲ್ದಾಣಕ್ಕೆ‌ ಎಸಿಐ ಲೆವೆಲ್ 4 ಮಾನ್ಯತೆ

Update: 2025-07-27 22:52 IST

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರಾಹಕ ಅನುಭವಕ್ಕಾಗಿ ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್‌ನಿಂದ ಪ್ರತಿಷ್ಠಿತ ಎಸಿಐ ಲೆವೆಲ್ 4 ಮಾನ್ಯತೆ ಪಡೆದಿದೆ.

ಗ್ರಾಹಕ ಸೇವೆಯಲ್ಲಿ ಶ್ರೇಷ್ಠತೆಯತ್ತ ಸಾಗುವ ಪ್ರಯಾಣದಲ್ಲಿ ವಿಮಾನ ನಿಲ್ದಾಣವು ಮಹತ್ವದ ಮೈಲಿಗಲ್ಲು ತಲುಪಿದೆ.

ಮಂಗಳೂರು ವಿಮಾನ ನಿಲ್ದಾಣವನ್ನು ಜಾಗತಿಕ ಮಟ್ಟದಲ್ಲಿ ಕೆಲವೇ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿ ಮಾಡುತ್ತದೆ. ಇದು ಪ್ರಯಾಣಿಕರ ಅನುಭವವನ್ನು ಎಲ್ಲಾ ಹಂತಗಳಲ್ಲಿ ಉತ್ತಮಗೊಳಿಸಲು ವಿಶೇಷ ಬದ್ಧತೆಯನ್ನು ತೋರಿಸುತ್ತದೆ. ಫೆಬ್ರವರಿ 2024ರಲ್ಲಿ ಲೆವೆಲ್ 3 ಮಾನ್ಯತೆ ಪಡೆದಿತ್ತು.

ಈ ಮಾನ್ಯತೆ ವಿಮಾನ ನಿಲ್ದಾಣದ ಸಂಸ್ಕೃತಿ , ಆಡಳಿತ, ಕಾರ್ಯಾಚರಣಾ ಸುಧಾರಣೆ, ಅಳೆಯುವಿಕೆ, ಗ್ರಾಹಕ ತಂತ್ರ ಮತ್ತು ಗ್ರಾಹಕ ಅರಿವು ಮುಂತಾದ ಅಂಶಗಳನ್ನು ಮೌಲ್ಯಮಾಪನ ಮಾಡುತ್ತದೆ.

ಕಳೆದ ಒಂದು ವರ್ಷದಲ್ಲಿ, ಮಂಗಳೂರು ವಿಮಾನ ನಿಲ್ದಾಣವು ತಂತ್ರಜ್ಞಾನ ಆಧಾರಿತ ನವೀನತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕರ ತೊಡಗಿಸಿಕೊಳ್ಳುವಿಕೆಯನ್ನು ಗುರಿಯಾಗಿಸಿಕೊಂಡು ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿತ್ತು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News