×
Ad

ಮಂಗಳೂರು | ಕುಂಟಿಕಾನದಲ್ಲಿ ಮೀನು ವ್ಯಾಪಾರಿಯ ಕೊಲೆ ಯತ್ನ

Update: 2025-05-02 12:01 IST

ಮೀನು ವ್ಯಾಪಾರಿ ಲುಕ್ಮಾನ್ 

ಮಂಗಳೂರು: ಮೀನು ವ್ಯಾಪಾರಿಯೋರ್ವರು ನಗರದ ಕುಂಟಿಕಾನದಲ್ಲಿ ಗ್ರಾಹಕರೊಬ್ಬರನ್ನು ಕಾಯುತ್ತಿದ್ದಾಗ, ಅವರ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಹಲ್ಲೆಗೊಳಗಾದ ಮೀನು ವ್ಯಾಪಾರಿಯನ್ನು ಉಳ್ಳಾಲದ ಲುಕ್ಮಾನ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಮೀನು ವ್ಯಾಪಾರಿಯಾಗಿರುವ ಲುಕ್ಮಾನ್, ಕುಂಟಿಕಾನದಲ್ಲಿ ಮೀನು ಕೊಡಲು ಗ್ರಾಹಕರೋರ್ವರನ್ನು ಕಾಯುತ್ತಿದ್ದರು. ಆ ವೇಳೆ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ತಂಡವು, ಲುಕ್ಮಾನ್ ಅವರ ಮೇಲೆ ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದೆ.

ತಪ್ಪಿಸಿಕೊಂಡು ಓಡಿ ಹೋಗಲು ನೋಡಿದಾಗ ಅಟ್ಟಾಡಿಸಿಕೊಂಡು ಬಂದು ಲುಕ್ಮಾನ್ ಅವರನ್ನು ಕೆಳಗೆ ಬೀಳಿಸಿದ ತಂಡವು ಅವರ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆಗೆ ಪ್ರಯತ್ನಿಸಿದೆ. ಅದನ್ನು ನೋಡಿದ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹೊಡೆದು ರಕ್ಷಣೆಗೆ ಮುಂದಾಗಿದ್ದರಿಂದ ಲುಕ್ಮಾನ್ ಪಾರಾಗಿದ್ದಾರೆ, ಎಂದು ಅವರು ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.

ಗಾಯಗೊಂಡಿರುವ ಲುಕ್ಮಾನ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News