ಮಂಗಳೂರು: ಸ್ಥಳಾಂತರಿತ 'ಐ ಸೆಂಟ್ರಲ್' ಸ್ಟೋರ್ ಶುಭಾರಂಭ
ಮಂಗಳೂರು: ನಗರದ ಸಿಟಿ ಸೆಂಟರ್ ಮಾಲ್ ನ ನೆಲ ಮಹಡಿಗೆ ನವೀಕೃತಗೊಂಡು ಸ್ಥಳಾಂತರಗೊಂಡ 'ಐ ಸೆಂಟ್ರಲ್' ಸ್ಟೋರ್ ನ ಉದ್ಘಾಟನೆ ಶುಕ್ರವಾರ ನೆರವೇರಿತು.
ಜನಪ್ರಿಯ ಆ್ಯಪಲ್ ಬ್ರಾಂಡ್ ನ ಅಧಿಕೃತ ಮಾರಾಟ ಸ್ಟೋರ್ ಆಗಿರುವ 'ಐ ಸೆಂಟ್ರಲ್'ನ ಸ್ಥಳಾಂತರಿತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿ ಅನ್ವಿತಾ ಸಾಗರ್ ʼಐ ಸೆಂಟ್ರಲ್ʼ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರಲ್ಲದೆ, ಅಲ್ಲಿನ ಬ್ರಾಂಡ್ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ಸಂಗೀತಗಾರ ಗುರುಕಿರಣ್ ಶೆಟ್ಟಿ ಮಾತನಾಡಿ, 'ಐ ಸೆಂಟ್ರಲ್' ನ ಆಡಳಿತ ನಿರ್ದೇಶ ಕೇಶವ್ ಜೊತೆಗಿನ ನಿಕಟ ಸ್ನೇಹವನ್ನು ಪ್ರಸ್ತಾಪಿಸಿದರು ಮತ್ತು ಆ್ಯಪಲ್ ಜೊತೆಗಿನ ತನ್ನ ಸಂಬಂಧ ಹಲವು ವರ್ಷಗಳದ್ದು ಎಂದರು.
ನಟ, ನಿರ್ದೇಶಕ ಮತ್ತು ನಿರ್ಮಾಪಕ ಶಿವಧ್ವಜ್ ಶೆಟ್ಟಿ ಮಾತನಾಡಿ, ಮಂಗಳೂರಿನ ಜನರು ಯಾವಾಗಲೂ ಹೊಸ ಉತ್ಪನ್ನಗಳ ಬಗ್ಗೆ ಉತ್ಸುಕರಾಗಿದ್ದು, ಇಲ್ಲಿನ ಮಾರುಕಟ್ಟೆ ಉತ್ತಮವಾಗಿದೆ ಎಂದರು.
ನಟ ಅರ್ಜುನ್ ದೇವ್ ʼಐ ಸೆಂಟರ್ʼ ಸ್ಟೋರ್ ವ್ಯವಹಾರದಲ್ಲಿ ನಿರಂತರ ಬೆಳವಣಿಗೆ ಹೊಂದಲಿ ಎಂದು ಹಾರೈಸಿದರು.
ಸೆಲೆಬ್ರಿಟಿ ಅತಿಥಿಗಳಲ್ಲದೆ, ಈ ಕಾರ್ಯಕ್ರಮದಲ್ಲಿ ಯೂಟ್ಯೂಬರ್ ಧೀರಜ್ ಶೆಟ್ಟಿ, ಜಾದೂಗಾರ ಕುದ್ರೋಳಿ ಗಣೇಶ್, ಮೊಹ್ತಿಶಾಮ್ ಕಾಂಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ. ಎಸ್.ಎಂ.ಅರ್ಷದ್ ಮೊಹ್ತಿಶಾಮ್, ಕಾರ್ಯನಿರ್ವಾಹಕ ನಿರ್ದೇಶಕ ಸಾವೂದ್ ಮೊಹ್ತಿಶಾಮ್ ಮತ್ತು ʼಐ ಸೆಂಟ್ರಲ್ʼ ನ ವ್ಯವಸ್ಥಾಪಕ ಪಾಲುದಾರರಾದ ಕೇಶವ್ ಎಚ್.ಆರ್. ಮತ್ತು ವಿನೀತ್ ವೇಣುಗೋಪಾಲ್ ಭಾಗವಹಿಸಿ ಮಾತನಾಡಿದರು.
ವಿಲಿತಾ ಕಾರ್ಯಕ್ರಮ ಸಂಯೋಜಿಸಿದ್ದು, ಸಂಗೀತ ಬ್ಯಾಂಡ್ ‘ಎಮೋಷನ್ಸ್’ ಮತ್ತು ಜಾದೂಗಾರ ಕುದ್ರೋಳಿ ಗಣೇಶ್ ಸಮಾರಂಭದಲ್ಲಿ ಪ್ರೇಕ್ಷಕರಿಗೆ ಮನೋರಂಜನಾ ಪ್ರದರ್ಶನ ನೀಡಿದರು.
ರಿಯಾಯಿತಿ ದರದ ಮಾರಾಟ
ʼಐ ಸೆಂಟ್ರಲ್ʼ ಸ್ಟೋರ್ ಸ್ಥಳಾಂತರದ ವಿಶೇಷ ಕೊಡುಗೆಯಾಗಿ, ಹೊಸದಾಗಿ ಬಿಡುಗಡೆಯಾದ ಐಫೋನ್ -16 ಮೇಲೆ ಸೀಮಿತ ಅವಧಿಗೆ 14,000 ರೂ. ರಿಯಾಯಿತಿಯನ್ನು ಘೋಷಿಸಲಾಗಿದೆ.