×
Ad

ಮಂಗಳೂರು| ಸೆ.19ರಂದು ʼಸಾರಾ ಡೈಮಂಡ್ಸ್ʼ ಶುಭಾರಂಭ

Update: 2025-09-18 18:16 IST

ಮಂಗಳೂರು, ಸೆ.18: ನಗರದ ಹಂಪನಕಟ್ಟೆಯ ಆಲ್ಫಾ ಟವರ್‌ನಲ್ಲಿರುವ ಚಾಯ್ಸ್ ಗೋಲ್ಡ್ (ಗೋಲ್ಡ್ ಆ್ಯಂಡ್ ಡೈಮಂಡ್ಸ್) ಇದರ ʼಸಾರಾ ಡೈಮಂಡ್ಸ್ʼ ಮಳಿಗೆಯ ಉದ್ಘಾಟನೆಯು ಸೆ.19ರಂದು ಸಂಜೆ 4:30ಕ್ಕೆ ನಡೆಯಲಿದೆ.

ಸೆ.19ರಿಂದ ಸೆ.28ರವರೆಗೆ ನಡೆಯುವ ಜಾಯ್ಸ್ ಡೈಮಂಡ್ ಪ್ರದರ್ಶನಕ್ಕೆ ಈ ಸಂದರ್ಭ ಚಾಲನೆ ನೀಡಲಾಗುತ್ತದೆ.

ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಮಂಜೇಶ್ವರದ ಸೈಯದ್ ಪೂಕುಂಞಿ ಕೋಯ ತಂಙಳ್, ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ರೆ.ಫಾ. ಬೊನವಂಚ್ ನಝ್ರತ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಉಳ್ಳಾಲ ದರ್ಗಾದ ಅಧ್ಯಕ್ಷ ಹನೀಫ್ ಹಾಜಿ, ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ನುಹ್‌ಮಾನ್ ಎನ್.ಎಸ್., ಎನ್.ಎಸ್. ಕರೀಂ ಮಂಜನಾಡಿ, ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ, ಬಾವಾ ಬಿಲ್ಡರ್‌ನ ಅಬ್ದುಲ್ ಖಾದರ್ (ಬಾವಾಕ), ನಿಶಾಜ್ ಮ್ಯಾಕ್‌ಓವರ್, ಇನ್‌ಸ್ಪೆಕ್ಟರ್ ಅಝ್‌ಮತ್ ಅಲಿ ಜಿ., ಉದ್ಯಮಿ ಇಬ್ರಾಹೀಂ ದೋಹ, ಜಲಾಲ್‌ಬಾಗ್, ಆಲ್ಫಾ ಟವರ್‌ನ ಲುತ್ಫುಲ್ಲಾ ಖಾಝಿ, ಉದ್ಯಮಿ ಲತೀಫ್ ಗುರುಪುರ, ಥೀಮ್ಸ್ ಡಿಸೈನರ್ ರೇಶ್ಮಾ ತೋಟ, ಪುತ್ತೂರು ದರ್ಬೆಯ ಏಶಿಯನ್ ವುಡ್ ಆ್ಯಂಡ್ ಇಂಡಸ್ಟ್ರೀಸ್‌ನ ಇಸ್ಮಾಯೀಲ್, ನ್ಯಾಶನಲ್ ಪ್ಯಾಲೇಸ್ ಹೊಟೇಲ್‌ನ ಅರಾಫತ್, ಉದಯೋನ್ಮುಖ ಕಲಾವಿದೆ ತೃಪ್ತಿ ಜನಾರ್ದನ್, ಎಸ್.ಕೆ.ಖಾದರ್ ಹಾಜಿ ಮುಡಿಪು, ಡಾ. ಧೀರಜ್‌ ಕುಮಾರ್ ವಿ., ಡಾ.ರಶ್ಮಿ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News