×
Ad

ಮಂಗಳೂರು: ನ.28ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೀಫ್ ನಿಂದ 'ಕೃತಜ್ಞತಾ ಸ್ನೇಹ ಸಮ್ಮಿಲನ'

Update: 2023-11-26 13:46 IST

ಮಂಗಳೂರು, ನ.26: ಮುಸ್ಲಿಮ್ ಎಜ್ಯುಕೇಶನಲ್ ಇನ್ ಸ್ಟಿಟ್ಯೂಶನ್ಸ್ ಫೆಡರೇಶನ್ (ಮೀಫ್)ಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ನ.28ರಂದು ಸಂಭ್ರಮಾಚರಣೆ ಕಾರ್ಯಕ್ರಮ ' ಕೃತಜ್ಞತಾ ಸ್ನೇಹ ಸಮ್ಮಿಲನ' (Thanks giving Get-together) ಆಯೋಜಿಸಲಾಗಿದೆ.

ಅಂದು ಅಪರಾಹ್ನ 2:15ಕ್ಕೆ ನಗರದ ಕಂಕನಾಡಿಯಲ್ಲಿರುವ ಜಂಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸುವರು.

ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಪ್ರಾಸ್ತಾವಿಕವಾಗಿ ಮಾತನಾಡುವರು. ಮೀಫ್ ಗೌರವ ಸಲಹೆಗಾರ ಸೈಯದ್ ಮುಹಮ್ಮದ್ ಬ್ಯಾರಿ ಮುಖ್ಯ ಭಾಷಣ ಮಾಡುವರು.

ಗೌರವ ಅತಿಥಿಗಳಾಗಿ ಅಲ್ಪ ಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜೀಲಾನಿ ಎಚ್. ಮೊಕಾಶಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಬೆಂಗಳೂರಿನ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್ಸ್ ನಿರ್ದೇಶಕಿ ನಫೀಸಾ ಅಹ್ಮದ್ ಹಾಗೂ ಬೆಂಗಳೂರಿನ ಅಜೀಂ ಪ್ರೇಂಜೀ ಫೌಂಡೇಶನ್ ನ ಶೈಖ್ ಜಿನ್ನಾ ಭಾಗವಹಿಸುವರು.

ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News