ಮಂಗಳೂರು: ಉದ್ಯಮಿ ಬಿ.ಎಂ.ಅಬ್ಬಾಸ್ ಹಾಜಿ ನಿಧನ
Update: 2025-07-24 08:15 IST
ಮಂಗಳೂರು: ನಗರದ ಕಂಕನಾಡಿಯ ನಿವಾಸಿ, ಉದ್ಯಮಿ ಬಿ.ಎಂ.ಅಬ್ಬಾಸ್ ಹಾಜಿ (75) ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು.
ಇವರು ಮಂಗಳೂರಿನ ಹಿರಿಯ ಉದ್ಯಮಿ ಹಾಗೂ ಸಮುದಾಯದ ಪ್ರಮುಖರಾಗಿದ್ದ ಮರ್ಹೂಂ ಬಿ.ಎಂ. ಹಸನ್ ಹಾಜಿಯವರ ಪುತ್ರ. ಅಬ್ಬಾಸ್ ಹಾಜಿ ಅವರು ಬಂದರ್ ಜೀನತ್ ಬಕ್ಷ್ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮಯ್ಯತ್ ದಫನ ಕಾರ್ಯವು ಬಂದರ್‌ನಲ್ಲಿರುವ ಕೇಂದ್ರ ಜುಮ್ಮಾ ಮಸೀದಿಯ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.