ಮಂಗಳೂರು | ವಿಶ್ವ ಸಂಸ್ಥೆಯು ಅಂತರರಾಷ್ಟ್ರೀಯ ಸ್ವಯಂ ಸೇವಕರ ದಿನಾಚರಣೆ ಕಾರ್ಯಕ್ರಮಕ್ಕೆ ಯು.ಟಿ.ಖಾದರ್ ರಿಂದ ಚಾಲನೆ
ಮಂಗಳೂರು,ಡಿ.7 : ಸ್ವಯಂಸೇವಕರು ಪರಿಣಾಮಕಾರಿ ಬದಲಾವಣೆ ಮೂಲಕ ಹೆಚ್ಚು ಸುಸ್ಥಿರ ಮತ್ತು ಪ್ರಗತಿಪರ ರಾಷ್ಟ್ರವನ್ನು ನಿರ್ಮಿಸಬಲ್ಲರು ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಅವರು ವಿಶ್ವ ಸಂಸ್ಥೆಯು ಅಂತರರಾಷ್ಟ್ರೀಯ ಸ್ವಯಂಸೇವಕರ ದಿನ 2025 ವರ್ಷವನ್ನು “ಪ್ರತಿಯೊಂದು ಕೊಡುಗೆಯೂ ಮುಖ್ಯ" ವಾಕ್ಯದೊಂದಿಗೆ ಯುನೈಟೆಡ್ ನೇಷನ್ಸ್ ವಾಲಂಟಿಯರ್ಸ್ಇಂಡಿಯಾದ ಸಹಭಾಗಿತ್ವದಲ್ಲಿ ಯುವನಿಕಾ ಫೌಂಡೇಶನ್ ಮತ್ತು ಆರೋಗ್ಯ ಸ್ವಯಂಸೇವಕರು ಮತ್ತು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅತಿಥಿಯಾಗಿ ಭಾಗವಹಿಸಿದ ಶಾಸಕ ಐವನ್ ಡಿ'ಸೋಜಾ ಮಾತನಾಡುತ್ತಾ, ಸ್ವಯಂಸೇವಕರು ಸಹಾನುಭೂತಿ, ಜವಾಬ್ದಾರಿ ಮತ್ತು ಉದ್ದೇಶದೊಂದಿಗೆ ಮುನ್ನಡೆಸಲು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಸಹಾಯಕ ಆಯುಕ್ತೆ ಸೌ.ಮೀನಾಕ್ಷಿ ಆರ್ಯಾ (ಐ. ಎ. ಎಸ್) ಅವರು, ಸ್ವಯಂಸೇವೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ವೆನಿಸ್ಸಾ ಎ.ಸಿ. ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಎಂ.ಜೈಕಿಶನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಅಂತರರಾಷ್ಟ್ರೀಯ ಸ್ವಯಂಸೇವಕರ ದಿನ 2025 ಕಾರ್ಯಕ್ರಮ ಸಂಯೋಜಕ ರಘುವೀರ್ ಸೂಟರ್ ಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರೋಗ್ಯ ಸ್ವಯಂಸೇವಕರ ನಿರ್ದೇಶಕಿ ರಿಷಿ ಬನ್ಸಿವಾಲ್ ಅಂತಾರಾಷ್ಟ್ರೀಯ ಸ್ವಯಂಸೇವ ಕರ ದಿನ 2025 ದಿನದಂದು, ತಮ್ಮ ವಿಶಿಷ್ಟ ಸೇವಾ ಸಾಧನೆಗಾಗಿ ಹಲವಾರು ಯುವ ಸ್ವಯಂಸೇವಕರನ್ನು ಗೌರವಿಸಿದರು.
ಕ್ಯಾಡೆಟ್ ಸೆಲಿನ್ ಡಿಸಿಲ್ವಾ (ಆಲ್ ಇಂಡಿಯಾ ವಾಯು ಸೈನಿಕ್ ಕ್ಯಾಂಪ್ – AIVSC), ಕ್ಯಾಡೆಟ್ ಸೋನಾಲ್ ಜೆಸಿಕಾ ಕ್ರಾಸ್ಟಾ (ಪ್ಯಾರಾ ಬೇಸಿಕ್ ಕೋರ್ಸ್, ಸೆಂಟ್ ಆಗ್ನೆಸ್ ಕಾಲೇಜು) ಮತ್ತು ಹಿತೇಶ್ ಬಂಗೇರಾ (ಯೂನಿವರ್ಸಿಟಿ ಕಾಲೇಜು) ಅವರನ್ನು ಅವರ ನಾಯಕತ್ವ ಮತ್ತು ಸ್ವಯಂಸೇವಾ ಸೇವೆಗಾಗಿ ಸನ್ಮಾನಿಸಲಾಯಿತು
ಇಂಟರ್‌ನ್ಯಾಷನಲ್ ವಾಲಂಟಿಯರ್ಸ್ ಡೇ 2025 ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್, ಮಂಗಳೂರು ಪ್ರಾದೇಶಿಕ ಕಚೇರಿ ಪ್ರಾಯೋಜಕತ್ವದೊಂದಿಗೆ ನಡೆಸಲಾಯಿತು.
ಗಾಯತ್ರಿ ಬಿ. ಕೆ ಕಾರ್ಯಕ್ರಮವನ್ನು ಸಂಯೋಜಿಸಿ ಧನ್ಯವಾದಗಳನ್ನು ಅರ್ಪಿಸಿದರು.