×
Ad

ಮಸ್ನವಿ ಸಂಸ್ಥೆಯಿಂದ "ಅಲ್ ಖಾನಿತಾ" ಕೋರ್ಸ್ ಗೆ ಚಾಲನೆ

Update: 2024-12-02 11:13 IST

ಮಂಗಳೂರು, ಫಳ್ನೀ ರ್ ಕೇಂದ್ರವಾಗಿ ಕಾರ್ಯಾಚರಣೆ ಮಾಡುತ್ತಿರುವ ಮಸ್ನವಿ ಖುರ್‌ಆನಿಕ್ ಸೆಂಟರ್ ವತಿಯಿಂದ ಮಹಿಳೆಯರಿಗಾಗಿ ರಚಿಸಿದ ಅಲ್ ಖಾನಿತಾ ಕೋರ್ಸ್ ಗೆ ಡಿಸೆಂಬರ್ 3 ಮಂಗಳವಾರ ಚಾಲನೆ ನೀಡಲಾಗುವುದು.

ಖುರ್ಆನ್, ಹದೀಸ್, ಫಿಖ್ಹ್, ವಿಶ್ವಾಸ ಜೀವನ ಮೌಲ್ಯ ಗಳು, ಮುಂತಾದ, ಮಹಿಳೆಯರಿಗೆ ಅಗತ್ಯವಾದ ವಿಷಯಗಳನ್ನು ಒಳಗೊಂಡ ಕೋರ್ಸ್ ಇದಾಗಿದ್ದು ಕೊನೆಗೆ ಸರ್ಟಿಫಿಕೇಟ್ ನೀಡಲಾಗುವುದು.

ಕ್ಲಾಸುಗಳಿಗೆ ವಿದ್ವಾಂಸೆ ಹಾಗೂ ತರಬೇತುದಾರರಾದ ನಸೀಮಾ ಬಿಂತ್ ಹಸನ್ ನೇತೃತ್ವ ಕೊಡಲಿದ್ದಾರೆ, ಮಸ್ನವಿ ಶೀ ಕ್ಲಬ್ ಕಾರ್ಯಕ್ರಮದ ಮುಂದಾಳತ್ವ ವಹಿಸಲಿದೆ.

ಡಾ. ಎಮ್ಮೆಸ್ಸೆಂ.ಝೖನೀ ಕಾಮಿಲ್ ಅವರ ನೇತೃತ್ವದ ಮಸ್ನವಿ ಖುರ್‌ಆನಿಕ್ ಸೆಂಟರ್ ಅಧೀನದಲ್ಲಿ ಈಗಾಗಲೇ ಪ್ರಾಥಮಿಕ ಮದ್ರಸ, ಪ್ರತಿ ಮಂಗಳವಾರ ಮಹಿಳೆಯರಿಗೆ ಹಾಗೂ ಪ್ರತಿ ಶುಕ್ರವಾರ ರಾತ್ರಿ ಪುರುಷರಿಗೆ ಧಾರ್ಮಿಕ ಕ್ಲಾಸ್ ಗಳು ನಡೆಯುತ್ತವೆ.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News