×
Ad

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಕುತ್ತಾರಿನ ನೆಫೀಸ ಹಿಬಾತ್ ಕಂಚಿನ ಪದಕ

Update: 2024-11-28 13:11 IST

ಮಂಗಳೂರು: ರಾಜ್ಯ ಶಿಕ್ಷಣ ಇಲಾಖೆ ನ.26 ರಂದು ಮೈಸೂರಲ್ಲಿ ನಡೆಸಿದ ಕರಾಟೆ ಸ್ಪರ್ಧೆಯಲ್ಲಿ ಕುತ್ತಾರಿನ ನೆಫೀಸ ಹಿಬಾತ್ ಕಂಚಿನ ಪದಕ ಪಡೆದಿದ್ದಾಳೆ.

ತನ್ನ ಎಂಟನೇ ವಯಸ್ಸಿನಲ್ಲಿ ಕರಾಟೆ ತರಬೇತಿ ಪಡೆಯುವುದರೊಂದಿಗೆ ರಾಷ್ಟ್ರ, ರಾಜ್ಯ, ಜಿಲ್ಲಾ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ಚಿನ್ನದ ಪದಕ, 2ಬೆಳ್ಳಿ ಪದಕ ಹಾಗೂ 4ಕಂಚಿನ ಪದಕವನ್ನು ಪಡೆದಿರುತ್ತಾಳೆ.

ಕುತ್ತಾರಿನ ಯಾಸಿರ್ ಅರಫಾತ್ ಹಾಗೂ ಕೌಸರ್ ಪಕ್ಕಲಡ್ಕ ಇವರ ಪುತ್ರಿಯಾಗಿರುವ ಈಕೆ, ಕವಿ ಹಾಗೂ ಉಳ್ಳಾಲದ ಮಾಜಿ ಶಾಸಕರಾಗಿದ್ದ ಮರ್ಹೂಂ ಬಿ. ಎಂ. ಇದ್ದಿನಬ್ಬರವರ ಮರಿ ಮೊಮ್ಮಗಳು.

 ಸ್ನೇಹ ಪಬ್ಲಿಕ್ ಸ್ಕೂಲ್‌ನ ಒಂಬತ್ತನೆ ತರಗತಿಯ ವಿದ್ಯಾರ್ಥಿನಿ ಆಗಿರುವ ಈಕೆ, ಕೋಚ್ ವಿನೋದ್ ರಾವ್ ರವರಿಂದ ತರಬೇತಿ ಪಡೆಯುತ್ತಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News