×
Ad

ಪುದು ಗ್ರಾಮ ಪಂಚಾಯತ್ ಉಪ ಚುನಾವಣೆ; ಕಾಂಗ್ರೆಸ್ ಬೆಂಬಲಿತ ಇಕ್ಬಾಲ್ ಗೆಲುವು

Update: 2023-07-26 11:53 IST

ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ 10 ನೇ ವಾರ್ಡ್ ಮಾರಿಪ್ಪಳ್ಳ, ಸದಸ್ಯರಾದ ಹುಸೈನ್ ಪಾಡಿ ಮರಣ ಹೊಂದಿದ ಹಿನ್ನಲೆಯಲ್ಲಿ ಜುಲೈ 23 ರಂದು ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಪಾಡಿ 385 ಮತ ಪಡೆದು ವಿಜೇತರಾಗಿದ್ದಾರೆ

ಇವರು ಮರಣ ಹೊಂದಿದ ಹುಸೈನ್ ಪಾಡಿ ರವರ ಪುತ್ರನಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶ್ರಫ್ 140 ಮತ ಪಡೆದರೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಲತೀಫ್ 39 ಮತ ಪಡೆದು ಪರಾಭವಗೊಂಡಿದ್ದಾರೆ.

 

ಮರಣ ಹೊಂದಿದ ಪಂಚಾಯತ್ ಸದಸ್ಯ ಹುಸೈನ್ ಪಾಡಿ ರವರು ಈ ವಾರ್ಡಿನಲ್ಲಿ ಎಲ್ಲರೊಂದಿಗೆ ಬೆರೆತು ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು ಇವರ ಮಗ ಇಕ್ಬಾಲ್ ಈಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕ್ಷೇತ್ರದ ಶಾಸಕರಾದ ಯುಟಿ ಖಾದರ್ ಮತ್ತು ಪುದು ಪುದು ಗ್ರಾಮ ಪಂಚಾಯತ್ ಕೈಗೊಂಡ ಅಭಿವೃದ್ಧಿ ಹಾಗೂ ಸರಕಾರದ ಜನಪರ ಯೋಜನೆಗಳಾಗಿದೆ.

 -ರಮ್ಲಾನ್ ಮಾರಿಪ್ಪಳ್ಳ

ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ಪುದು ಗ್ರಾಮ ಪಂಚಾಯತ್


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News