×
Ad

ಸುಳ್ಯ: ಕಾಡು ಹಣ್ಣಿನ ಶರಬತ್ತು ಸೇವಿಸಿದ ಮಹಿಳೆ ಮೃತ್ಯು

Update: 2023-10-03 15:18 IST

ಸುಳ್ಯ, ಅ.3: ಕಾಡಿನಲ್ಲಿ ಸಿಗುವ ಯಾವುದೋ (ಮೈರೋಳ್ ಹಣ್ಣು) ಹಣ್ಣನ್ನು ಸೇವಿಸಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.

ಅಮರಪಡ್ನೂರು ಗ್ರಾಮದ ಕುಳ್ಳಾಜೆ ನಿವಾಸಿ ಲೀಲಾವತಿ(35) ಮೃತಪಟ್ಟವರು. ಇವರ ಇದೇ ಲೋಕಯ್ಯ ನಾಯ್ಕ ಕೂಡಾ ಹಣ್ಣಿನ ಶರಬತ್ತು ಕುಡಿದು ಅಸ್ವಸ್ಥಗೊಂಡಿದ್ದರೆನ್ನಲಾಗಿದೆ.

ಲೀಲಾವತಿ ಹಾಗೂ ಲೋಕಯ್ಯ ನಾಯ್ಕ ಒಂದು ವಾರದ ಹಿಂದೆ ಮೈರೋಳ್ ಹಣ್ಣಿನ ರಸ ತೆಗೆದು ಶರಬತ್ತು ಮಾಡಿ ಕುಡಿದಿದ್ದರು ಎನ್ನಲಾಗಿದೆ. ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥಗೊಂಡಿದ್ದರು. ಈ ಪೈಕಿ ವಾಂತಿ, ಭೇದಿ ಕಾಣಿಸಿಕೊಂಡಿದ್ದ ಲೀಲಾವತಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ವಸ್ಥತೆ ತೀವ್ರಗೊಂಡ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಮೃತರು ಪತಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News