×
Ad

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕಾರು ಪತ್ತೆ; ವ್ಯಕ್ತಿ ನದಿಗೆ ಹಾರಿರುವ ಶಂಕೆ

Update: 2023-10-30 14:20 IST

ಮಂಗಳೂರು, ಆ.30: ರಾಷ್ಟ್ರೀಯ ಹೆದ್ದಾರಿ 67ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಇಂದು ಮಧ್ಯಾಹ್ಮ ಪತ್ತೆಯಾಗಿದ್ದು, ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಕಾರನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೊಬ್ಬರ ಕೆಲವು ಗುರುತಿನ ಕಾರ್ಡ್‌ಗಳು ಕಂಡು ಬಂದಿವೆ. ಅದಲ್ಲದೆ ಕಾರಿನ ಕೀ ಕೂಡಾ ಕಾರಿನಲ್ಲೇ ಪತ್ತೆಯಾಗಿದೆ. ಕಾರು ಚಲಾಯಿಸಿಕೊಂಡ ವ್ಯಕ್ತಿ ಯಾರು, ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ತಿಳಿದು ಬಂದಿಲ್ಲ.

ಕಾರಿನಲ್ಲಿ ಕಂಡು ಬಂದ ಗುರುತಿನ ಚೀಟಿಯ ಆಧಾರದ ಮೇಲೆ ಆ ವ್ಯಕ್ತಿಯ ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಲಾಗಿದೆ. ಮನೆ ಮಂದಿ ಬಂದ ಬಳಿಕ ವಾಸ್ತವಾಂಶ ತಿಳಿಯಬಹುದಾಗಿದೆ ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News