×
Ad

ಉಳ್ಳಾಲ: ಬೀಚ್ ನಲ್ಲಿ ಯುವಕನ ಮೃತದೇಹ ಪತ್ತೆ

Update: 2023-08-13 11:50 IST

ಸಾಂದರ್ಭಿಕ ಚಿತ್ರ

ಉಳ್ಳಾಲ, ಆ.13: ಇಲ್ಲಿನ ಠಾಣಾ ವ್ಯಾಪ್ತಿಯ ಉಳಿಯ ನೇತ್ರಾವತಿ ನದಿಯ ಬಳಿ ಯುವಕನೋರ್ವನ ಮೃತದೇಹ ರವಿವಾರ ಬೆಳಗ್ಗೆ ಪತ್ತೆಯಾಗಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬಳಂಜ ನಿವಾಸಿ ರಾಜೇಶ್ (27) ಎಂದು ಗುರುತಿಸಲಾಗಿದೆ.

.ರಾಜೇಶ್ ಕಳೆದ ಶುಕ್ರವಾರ ಸಂಜೆ 4 ಗಂಟೆಗೆ ಮನೆಯಿಂದ ತೆರಳಿದವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪೋಷಕರು ಪೂಂಜಾಲಕಟ್ಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಶನಿವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ರಾಜೇಶ್ ಅವರ ಬೈಕ್ ಪತ್ತೆಯಾಗಿತ್ತು.

ಇಂದು ಬೆಳಗ್ಗೆ ಉಳ್ಳಾಲ ಉಳಿಯದ ನೇತ್ರಾವತಿ ನದಿಯಲ್ಲಿ ತೇಳುತ್ತಿದ್ದ ಮೃತದೇಹವನ್ನ ಸ್ಥಳೀಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ ಮತ್ತು ಸ್ನೇಹಿತರು ಎಳೆದು ದಡಕ್ಕೆ ಹಾಕಿದ್ದಾರೆ. ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದರು. ಈ ಬಗ್ಗೆ ರಾಜೇಶ್ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದು, ಅದರಂತೆ ಅವರು ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News