×
Ad

ಯುನಿವೆಫ್- ಜುಲೈ 29 ರಂದು ಉಳ್ಳಾಲದಲ್ಲಿ ಕುರ್ ಆನ್ ಪರಿಚಯ ಕಾರ್ಯಕ್ರಮ

Update: 2023-07-28 15:42 IST

ಯುನಿವೆಫ್ ಕರ್ನಾಟಕ ಜುಲೈ 21ರಿಂದ ಆಗಸ್ಟ್ 25 ರ ತನಕ "ಓದಿರಿ ಸೃಷ್ಟಿಕರ್ತನ ಸಂದೇಶವನ್ನು" ಎಂಬ ಕೇಂದ್ರಿಯ ವಿಷಯದಲ್ಲಿ ಹಮ್ಮಿಕೊಂಡಿರುವ ಕುರ್ ಆನ್ ಪರಿಚಯ ಅಭಿಯಾನದ ಸಾರ್ವಜನಿಕ ಸಭೆಯು ಜುಲೈ 29 ರ ಶನಿವಾರ ರಾತ್ರಿ 8.30 ಕ್ಕೆ ಉಳ್ಳಾಲ ಮುಕ್ಕಚ್ಚೇರಿಯ ನಿಮ್ರಾ ಮಸೀದಿಯಲ್ಲಿ ಜರಗಲಿದೆ.

ಯುನಿವೆಫ್ ಅಧ್ಯಕ್ಷ ಹಾಗೂ ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿಯವರು “ಕುರ್ ಆನ್ ಪರಿವರ್ತನೆಯ ರಹದಾರಿ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿರುವರು.

ಸ್ರ್ತೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News