×
Ad

ವಳಚ್ಚಿಲ್: ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಇಫ್ತಾರ್ ಮೀಟ್

Update: 2024-04-03 16:13 IST

ಫರಂಗಿಪೇಟೆ, ಎ.2: ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳ ʼಸಿಟ್ ಬ್ರದರ್ಸ್ʼ ತಂಡದ ವತಿಯಿಂದ ಅಲ್ ಬದ್ರಿಯಾ ಜುಮ್ಮಾ ಮಸೀದಿ ವಳಚ್ಚಿಲ್ ಪದವು ವಠಾರದಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ಮಂಗಳವಾರ ನಡೆಯಿತು

ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ದುಆಗೈದು ಮಾತನಾಡಿ, ಜಾಗತಿಕ ಮುಸ್ಲಿಮರು ರಮಳಾನ್ ತಿಂಗಳಲ್ಲಿ ವ್ರತ ಆಚರಿಸುತ್ತಾ ಇತರರ ಸಂಕಷ್ಟಗಳಿಗೆ ನೆರವಾಗುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ಗರಿಷ್ಠ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಾ ಇದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಟ್ಟು ಸೇರಿ ಈ  ಇಫ್ತಾರ್ ಮೀಟ್ ಆಯೋಜಿಸಿದ್ದು ಶ್ಲಾಘನೀಯ ಎಂದರು.

‌ಎಸ್ಕೆಎಸ್ ಎಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ, ಸಿರಾಜುದ್ದೀನ್ ಮದನಿ, ಹಮೀದ್ ಹನೀಫಿ, ಹಸೈನಾರ್ ಫೈಝಿ, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಸೀನ್ ಅರ್ಕುಳ, ಸದಸ್ಯರಾದ ಉಬೈದ್, ಶಬೀರ್, ಡೈಮಂಡ್ ಅಲ್ತಾಫ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶಿರ್ ಪೇರಿಮಾರ್,‌ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಮಸೀದಿ ಗೌರವಾಧ್ಯಕ್ಷ ಅಬ್ದುರ್ರಹ್ಮಾನ್‌, ಅಧ್ಯಕ್ಷ ಮುಹಮ್ಮದ್ ಆಶ್ರಫ್, ಉಪಾಧ್ಯಕ್ಷ ಸಿದ್ದೀಕ್ ಝುಬೈರ್ ಕಾರ್ಯದರ್ಶಿ ನಝೀರ್, ಕೋಶಾಧಿಕಾರಿ ಮುಹಮ್ಮದ್ ಅಲಿ, ಶ್ರೀನಿವಾಸ್ ವಿದ್ಯಾರ್ಥಿಗಳಾದ ಝಿಯಾದ್ ನೆಲ್ಯಾಡಿ, ಅನ್ವರ್ ಬನ್ನೂರು, ತನ್ವೀರ್, ರಿಫಾಝ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News