ರೂಹಿನಾಝ್ ಖಾನಂಗೆ ಪಿಎಚ್.ಡಿ. ಪದವಿ
Update: 2026-07-03 15:05 IST
ದಾವಣಗೆರೆ: ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ರೂಹಿನಾಝ್ ಖಾನಂ ಅವರು ಸಲ್ಲಿಸಿದ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.
ರೂಹಿನಾಝ್ ಅವರು ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆರ್.ಎ. ಶೌಕತ್ ಅಲಿ ಅವರ ಮಾರ್ಗದರ್ಶನದಲ್ಲಿ ‘ಸ್ಟಡೀಸ್ ಆನ್ ಸಿಂಥೆಸಿಸ್ ಅಂಡ್ ಅಪ್ಲಿಕೇಷನ್ಸ್ ಆಫ್ 1,4-ಬೆಂಝೋ ಡೈಆಕ್ಸಾನ್-6-ಅಮೈನ್ ಅಂಡ್ 5,6,7,8-ಟೆಟ್ರಹೈಡ್ರೋ-2-ನ್ಯಾಫ್ಥೈಲ್ ಅಮೈನ್ ಬೇಸ್ಡ್ ಅಝೋ ಡೈಸ್’ ಎಂಬ ವಿಷಯ ಕುರಿತಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.