ರಾಜೇಂದ್ರ ಮೂಡುಬಿದಿರೆ
ಮೂಡುಬಿದಿರೆ: ಮಂಗಳೂರು ಗಣೇಶ್ ಬೀಡಿ ಇದರ ಅಂಗ ಸಂಸ್ಥೆ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ನ ನಿವೃತ್ತ ಉದ್ಯೋಗಿ ರಾಜೇಂದ್ರ ಎಂ (84 ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಅ27ರಂದು ಲಾವಂತ ಬೆಟ್ಟು ರಸ್ತೆ ಪರಿಸರದಲ್ಲಿರುವ ತಮ್ಮಸ್ವಾಗತ್ ನಿವಾಸದಲ್ಲಿ ನಿಧನ ಹೊಂದಿದರು.
ಅವರು ಪತ್ನಿ, ಮೂವರು ಪುತ್ರರು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.
ಮೈಸೂರಿನಲ್ಲಿ ಗಣೇಶ್ ಬೀಡಿ ಪ್ರಧಾನ ಶಾಖೆ, ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅವರು ಬಳಿಕ ಹೋಂ ಇಂಡಸ್ಟ್ರೀಸ್ ನ ಮಂಗಳೂರು ಮತ್ತು ಮೂಡುಬಿದಿರೆ ಶಾಖೆಯಲ್ಲಿ ಮೂರುವರೆ ದಶಕಗಳಿಗೂ ಮಿಕ್ಕಿದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ವರ್ತಕರಾಗಿದ್ದ ಅವರು ಅಂದಿನ ದಿನಗಳಲ್ಲಿ ಅಗತ್ಯವೆನಿಸಿದ್ದ ಟೆಲಿಫೋನ್ ಬೂತ್ ಸೌಲಭ್ಯವನ್ನೂ ಒದಗಿಸಿದ್ದರು.