ದುಬೈನಲ್ಲಿ ಮತ್ತೆ ಭಾರೀ ಮಳೆ | ವಿಮಾನ ಹಾರಾಟ ರದ್ದು

Update: 2024-05-02 16:57 GMT

PC : X 

ದುಬೈ: ಯುಎಇಯಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು ಅಬುಧಾಬಿ ಮತ್ತು ದುಬೈಯಲ್ಲಿ ಗುರುವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಹಲವು ವಿಮಾನಗಳ ಹಾರಾಟವನ್ನು ಮತ್ತು ಬಸ್ಸು ಸೇವೆಯನ್ನು ರದ್ದುಗೊಳಿಸಲಾಗಿದೆ.

ಬುಧವಾರ ರಾತ್ರಿ ದುಬೈಗೆ ಬರುತ್ತಿದ್ದ ಐದು ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ. ದುಬೈಗೆ ಬರುವ 9 ವಿಮಾನಗಳು ಹಾಗೂ ದುಬೈಯಿಂದ ಹೊರಡುವ 4 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಎಮಿರೇಟ್ಸ್‍ನ ಹಲವು ವಿಮಾನ ಸೇವೆಯನ್ನೂ ರದ್ದುಗೊಳಿಸಲಾಗಿದೆ ಎಂದು `ಖಲೀಜ್ ಟೈಮ್ಸ್' ವರದಿ ಮಾಡಿದೆ. ಯುಎಇಯಲ್ಲಿ ಅಸ್ಥಿರ ಹವಾಮಾನ ಪರಿಸ್ಥಿತಿ ಸೃಷ್ಟಿಯಾಗಿದ್ದು ಗುರುವಾರ ಮೋಡ ಕವಿದ ವಾತಾವರಣವಿತ್ತು. ಮೇ 3ರವರೆಗೂ ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಬುಧಾಬಿಯ ಹಲವು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದ್ದು ಜಿಬೆಲ್ ಆಲಿ, ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈ ಕೈಗಾರಿಕಾ ನಗರ, ದುಬೈ ಇನ್ವೆಸ್ಟ್ ಮೆಂಟ್ ಪಾರ್ಕ್ ಮತ್ತಿತರ ಪ್ರದೇಶಗಳಲ್ಲಿ ಬಿರುಗಾಳಿ ಬೀಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News