×
Ad

ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ ನಂ.1 ಟ್ರೆಂಡಿಂಗ್: ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಕನ್ನಡಿಗಾಸ್ ಫೆಡರೇಶನ್

Update: 2026-06-28 00:14 IST

ದುಬೈ: ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆಗೆ ಒತ್ತಾಯಿಸಿ ವಿಶ್ವದಾದ್ಯಂತದ ಕನ್ನಡಿಗರು ನಡೆಸಿದ ಟ್ವಿಟ್ಟರ್ (X) ಅಭಿಯಾನ ಭಾರತದಲ್ಲಿ ನಂ.1 ಟ್ರೆಂಡಿಂಗ್ ಆಗಿ ಗಮನ ಸೆಳೆದಿದೆ.

ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್‌ನಡಿ ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ಜೂನ್ 26ರಂದು ಸಂಜೆ 6 ಗಂಟೆಗೆ ನಡೆದ ಈ ಅಭಿಯಾನಕ್ಕೆ ವಿಶ್ವದ ವಿವಿಧ ದೇಶಗಳ ಅನಿವಾಸಿ ಕನ್ನಡಿಗರು ಮತ್ತು ಭಾರತದಲ್ಲಿನ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದನ್ನು ನಂ.1 ಟ್ರೆಂಡಿಂಗ್ ಮಾಡಲು ಸಹಕರಿಸಿದ ವಿಶ್ವದಾ ದ್ಯಂತದ ಎಲ್ಲಾ ಕನ್ನಡಪರ ಸಂಘಟನೆಗಳಿಗೆ ಕನ್ನಡಿಗಾಸ್ ಫೆಡರೇಶನ್ ಹಾಗೂ ರೊನಾಲ್ಡ್ ಕೊಲಾಸೊ ಪರವಾಗಿ ಹಿದಾಯತ್ ಅಡ್ಡೂರ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವಿಶೇಷವಾಗಿ ಪ್ರವೀಣ್ ಶೆಟ್ಟಿ, ಝಕರಿಯಾ ಜೋಕಟ್ಟೆ, ಮನ್ಸೂರ್ ಬಹರೈನ್, ಹೇಮೇಗೌಡ ಇಟಲಿ, ಶಶಿಧರ್ ನಾಗರಾಜಪ್ಪ, ಶಕೀಲ್ ಸೌದಿ ಅರೇಬಿಯಾ, ನೌಶಾದ್ ಬಜ್ಪೆ ಕುವೈತ್, ಸತೀಶ್ ಕುಮಾರ್, ಇಮ್ರಾನ್ ಎರ್ಮಾಳ್, ಮೋಹನದಾಸ್ ಕಾಮತ್, ಅರುಣ್ ಕುಮಾರ್, ಅಯಾಝ್ ಕೈಕಂಬ, ಶೇಕ್ ಮುಝಫರ್, ಫಾರೂಕ್, ಸನದ್, ಶಾಹಿದ್ ಶಿರ್ವ, ಸಂಶುದ್ದೀನ್ ಪಿಲಿಗೂಡು, ಭಾರ್ಗವ ಶರ್ಮ, ಮಹಮ್ಮದ್ ಫಿರೋಝ್, ರಫೀಕ್ ಕೆಎಚ್, ದಯಾ ಕಿರೋಡಿಯನ್, ಸರ್ವೋತ್ತಮ ಶೆಟ್ಟಿ, ಲತೀಫ್ ಕುವೈತ್, ಅನ್ವರ್ ಮನಿಲ, ಫಿರೋಝ್ ಸೌದಿ, ರಿಲ್ವಾನ್ ಹುಸೇನ್, ಇರ್ಷಾದ್ ಬಜ್ಪೆ, ಇಮ್ರಾನ್ ಅಡ್ಡೂರು, ರವಿ ಮಹದೇವ್, ಸ್ಟೀಫನ್, ಸಂತೋಷ್ ಶೆಟ್ಟಿ, ಪ್ರಕಾಶ್ ಕುವೈಟ್, ವಿಕ್ರಂ ಕುಂಜಿಬೆಟ್ಟು ಅವರ ಸಹಕಾರವನ್ನು ಹಿದಾಯತ್ ಅವರು ಸ್ಮರಿಸಿದ್ದಾರೆ.

ವಿವಿಧ ಅನಿವಾಸಿ ಕನ್ನಡ ಪರ, ಸಮುದಾಯ ಪರ, ಸಾಂಸ್ಕೃತಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಅನಿವಾಸಿ ಕಾರ್ಮಿಕ ವರ್ಗದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

"ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಅಭಿಯಾನ ಭಾರತದಲ್ಲಿ ನಂ.1 ಟ್ರೆಂಡಿಂಗ್ ಆಗಿ ರಾಜ್ಯ ಹಾಗೂ ದೇಶದ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವು ದಶಕಗಳಿಂದ ನಾವು ಒತ್ತಾಯಿಸುತ್ತಿರುವ ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆ ಕುರಿತ ಬೇಡಿಕೆಗೆ ಇದೀಗ ಹೊಸ ಆಶಾಭಾವ ಮೂಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿರುವ ಘೋಷಣೆಯಂತೆ ಸರ್ಕಾರ ಶೀಘ್ರದಲ್ಲೇ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ವಿಶ್ವಾಸ ನಮ್ಮದಾಗಿದೆ" ಎಂದು ಹಿದಾಯತ್ ಅಡ್ಡೂರ್ ಹೇಳಿದ್ದಾರೆ.

ಅವರು, ವಿಶ್ವದಾದ್ಯಂತ ಇರುವ ಎಲ್ಲಾ ಅನಿವಾಸಿ ಕನ್ನಡಿಗರು ಇದೇ ರೀತಿಯ ಒಗ್ಗಟ್ಟನ್ನು ಮುಂದುವರಿಸಿಕೊಂಡು ಕನ್ನಡಿಗರ ಹಿತಾಸಕ್ತಿಗಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News