×
Ad

ಒಮಾನ್| ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ 'ಸಲಾಲ ಬ್ಯಾರಿ ಕಮ್ಯುನಿಟಿ'ಯಿಂದ ಅಭಿನಂದನಾ ಕಾರ್ಯಕ್ರಮ

Update: 2026-05-22 20:53 IST

ಸಲಾಲ (ಒಮಾನ್): 'ಸಲಾಲ ಬ್ಯಾರಿ ಕಮ್ಯುನಿಟಿ' ಆಶ್ರಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿ ಗಳಿಗೆ ಅಭಿನಂದನಾ ಕಾರ್ಯಕ್ರಮವು ಒಮಾನ್ ನ ಸಲಾಲದ ಕೈರಾಲಿ ಹಾಲ್ ನಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಲಾಲದ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಅಪ್ಲೈಡ್ ಸೈನ್ಸಸ್ ನ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ನೂರುಲ್ ಹಸನ್ ಶೈಖ್, ಕಿಂಝಾ ಸೆಲ್ಸ್ ಮ್ಯಾನೇಜರ್ ಸಲೀಂ, ಧೋಫರ್ ಫಿಶರೀಸ್ ನ ಅಕೌಂಟ್ಸ್ ಮ್ಯಾನೇಜರ್ ಅಬ್ದುಲ್ ಲತೀಫ್ ಎಸ್., ಅಲ್ ನಜಾದ್ ಗ್ರೂಪ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ರಫ್, 'ಸಲಾಲ ಬ್ಯಾರಿ ಕಮ್ಯುನಿಟಿ' ಅಧ್ಯಕ್ಷ ಸಿದ್ದಿಕ್, ರೀಗಲ್ ಮೆಡಿಕಲ್ ಕಾಂಪ್ಲೆಕ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸದಕತುಲ್ಲಾ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮದ್ರಸ ಹಾಗು ಶಾಲಾ-ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ (ಶಾಲೆ ಮತ್ತು ಕಾಲೇಜು, ಮದ್ರಸಗಳ ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು ಅಂಕಗಳಿಸಿದ) ಒಟ್ಟು 13 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್

5ನೇ ತರಗತಿ ಮದರಸಾ:-

ಮರಿಯಂ ಐಫಾ – 99%

ಮುಹಮ್ಮದ್ ಆಯಾನ್ – 99%

ಇಝ್ಮಾ ಫಾತಿಮಾ – 90%

ಅಹ್ಮದ್ ಸಯಾನ್ – 87%

7ನೇ ತರಗತಿ ಮದರಸಾ:-

ಆಯಿಷಾ ಫಾತಿಮಾ ಅಖೀಫಾ – 92%

ಮುಹಮ್ಮದ್ ಸ್ವಲಾಹ್ – 90%

ಇಂಡಿಯನ್ ಸ್ಕೂಲ್ ಸಲಾಲಾ

10ನೇ ತರಗತಿ:-

ನುಷ್ರಹ್ ಫಾತಿಮಾ – 91%

ಮೊಹಮ್ಮದ್ ಕಾಶಿಫ್ – 82%

12ನೇ ತರಗತಿ – ವಿಜ್ಞಾನ ವಿಭಾಗ

ರಿದಾ ಸಮೀಹಾ – 94%

ಇಫ್ರಾ ಫಾತಿಮಾ – 90%

ಸಮ್ರೀನ್ ಬಾನು – 87%

12ನೇ ತರಗತಿ – ವಾಣಿಜ್ಯ ವಿಭಾಗ

ಫಾತಿಮಾ ಅಲ್ ಜಹ್ರಾ – 96%

ಮನ್ಹಾ ದಮ್ದಾ ಫಾಕಿ – 94%

ಫಾರೂಕ್ ಕಣ್ಣಂಗಾರ್ ಸ್ವಾಗತಿಸಿದರು. ಇಕ್ಬಾಲ್ ನಾಟೇಕಲ್ ಕಾರ್ಯಕ್ರಮ ನಿರೂಪಿಸಿದರು. ಮೊಹಮ್ಮದ್ ಅನಸ್ ಕುರ್‌ಆನ್ ಪರಿಸಿದರು. ಶಾಹಿದ್ (ಸಲಾಲ) ವಂದಿಸಿದರು.





















































Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News