ಆ.26ರಂದು ಅಬುಧಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

Update: 2026-08-22 18:53 IST

ಅಬುಧಾಬಿ: ಪ್ರವಾದಿ ಮುಹಮ್ಮದ್ (ಸ)ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಬುಧಾಬಿ ಸಮಿತಿ ವತಿಯಿಂದ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಹಯೋಗದೊಂದಿಗೆ ಆ.26ರಂದು ಅಬುಧಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

"ಪ್ರವಾದಿ (ಸ) ರವರ ಜೀವನ ಮಾನವತೆಗೆ ಮಾದರಿ" ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೌಲಿದ್ ಮಜ್ಲಿಸ್, ಬುರ್ದಾ ಮಜ್ಲಿಸ್ ಹಾಗೂ ದೀನಿ ಪ್ರಭಾಷಣ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ KCF UAE ರಾಷ್ಟ್ರೀಯ ಅಧ್ಯಕ್ಷ, ಪ್ರಸಿದ್ಧ ವಾಗ್ಮಿ ಇಬ್ರಾಹೀಂ ಸಖಾಫಿ ಕೆದುಂಬಾಡಿ ಅವರು ಮುಖ್ಯ ಪ್ರಭಾಷಣ ಮಾಡಲಿರುವರು.

ಹಲವು ಧಾರ್ಮಿಕ, ಸಾಮಾಜಿಕ ಮತ್ತು ಅನಿವಾಸಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಅನಿವಾಸಿ ಪ್ರವಾದಿ ಪ್ರೇಮಿಗಳ ಆಗಮನವನ್ನು ನಿರೀಕ್ಷಿಸಲಾಗಿದೆ.

ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

ಚೇರ್ಮನ್: ಮುಹಮ್ಮದ್ ಅಲಿ ಹಾಜಿ ಬ್ರೈಟ್

ಕನ್ವೀನರ್: ಅಬ್ದುಲ್ ರಝಾಕ್ ಸಅದಿ ವಗ್ಗ

ಖಜಾಂಜಿ: ಹಮೀದ್ ಕುಂಬಳೆ

ಸದಸ್ಯರು: ಉಮರ್ ಈಶ್ವರಮಂಗಿಲ, ಅಶ್ರಫ್ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಇಮ್ರಾನ್ ಕೆ.ಸಿ ರೋಡ್, ಹಾರಿಸ್ ಸಅದಿ ಮೂರ, ಲತೀಫ್ ಕನ್ನಡ್ಕ, ಅಶ್ರಫ್ ಸರಳಿಕಟ್ಟೆ, ಉಮರ್ ಸಖಾಫಿ, ಶರೀಫ್ ಬೊಳ್ಮಾರ್, ಹಂಝ ಬಂಗ್ಲೆ, ಹನೀಫ್ ಪಡೀಲ್, ಮುಕ್ಸಿತ್ ಝುಹ್ರಿ, ಫಾರೂಕ್ ಸಖಾಫಿ ಕನ್ಯಾನ, ನಿಸಾರ್ ಕುಂಬಳೆ, ಸಿದ್ದೀಕ್ ತೆಕ್ಕಾರ್, ಸಿದ್ದೀಕ್ ಅಳಿಕೆ, ಅರ್ಷದ್ ಪಡೀಲ್, ಸುಹೈಲ್ ಬಜ್ಪೆ, ಸಿದ್ದೀಕ್ ಕೆ.ಎಚ್ ಮೊದಲಾದವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು KCF ಅಬುಧಾಬಿ ಸಮಿತಿಯ ಅಧ್ಯಕ್ಷ ಕಬೀರ್ ಬಾಯಂಬಾಡಿ ಹಾಗೂ ಸ್ವಾಗತ ಸಮಿತಿಯ ಕೋಆರ್ಡಿನೇಟರ್ ಹಕೀಂ ತುರ್ಕಳಿಕೆ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News