ದುಬೈ: 'ಮೂಳೂರು ಜಮಾತ್ ವೆಲ್ಫೇರ್ ಫೋರಮ್'ನ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಮೂಸಬ್ಬ ಆಯ್ಕೆ
ಇಸ್ಮಾಯಿಲ್ ಮೂಸಬ್ಬ ಮೂಳೂರು
ದುಬೈ: ಮೂಳೂರು ಜಮಾತ್ ವೆಲ್ಫೇರ್ ಫೋರಮ್ ಇದರ 2026–27ನೇ ಸಾಲಿನ ವಾರ್ಷಿಕ ಮಹಾಸಭೆಯು ಇಲ್ಯಾಸ್ ಉಮರ್ ಮೂಳೂರು ಅವರ ನಿವಾಸದಲ್ಲಿ ರವಿವಾರ ನಡೆಯಿತು.
ಮೂಳೂರು ಜಮಾತ್ ವೆಲ್ಫೇರ್ ಫೋರಮ್ ಇದರ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಮೂಸಬ್ಬ ಮೂಳೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಮಾಲುದ್ದೀನ್ ಷರೀಫ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ವೇಳೆ ಇತರ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಯಿತು.
ಹಿರಿಯ ಮಾರ್ಗದರ್ಶಕರು:
ಗೌರವಾಧ್ಯಕ್ಷರು: ಹಾಜಿ ಎಂ.ಇ. ಮೂಳೂರು ಹಾಗೂ ಹಾಜಿ ಯೂಸುಫ್ ಉಮರ್
ನೂತನ ಪದಾಧಿಕಾರಿಗಳು:
ಉಪಾಧ್ಯಕ್ಷರು: ಬದ್ರುದ್ದೀನ್ ಅಲ್ ಫನಾ
ಜಂಟಿ ಕಾರ್ಯದರ್ಶಿಗಳು: ರಶೀದ್, ಇಸ್ಮಾಯಿಲ್ ಕರೀಂ
ಖಜಾಂಚಿ: ಆತೀಫ್ ಶಾಬಾನ್
ಲೆಕ್ಕಪರಿಶೋಧಕ: ಅಬ್ದುಲ್ ರಶೀದ್ ಮೊಹಮ್ಮದ್
ಕಾರ್ಯಕಾರಿ ಸಮಿತಿ ಅಧ್ಯಕ್ಷರು: ನವೀಝ್ ರಜಬ್
ಕಾರ್ಯಕ್ರಮ ಸಂಯೋಜಕರು(Event Coordinator): ಅಬ್ದುಲ್ ಸಮದ್ ಬೀರಲಿ
ಕಾರ್ಯಕಾರಿ ಸಮಿತಿ ಸದಸ್ಯರು(Executive Members)
ಭಾರತ ಪ್ರತಿನಿಧಿಗಳು: ಮುರಾದ್ ಅಲಿ, ಹಮೀದ್ ಯೂಸುಫ್
ಮುಖ್ಯ ಸಲಹೆಗಾರರು: ಇಸ್ಮಾಯಿಲ್ ಉಮ್ಮರ್, ಎಂ.ಇ ಉಸ್ಮಾನ್, ಇಲ್ಯಾಸ್ ಉಮರ್, ಅಬ್ದುಲ್ ರಹಿಮಾನ್ ಮಹಮೂದ್, ಅಹ್ಮದ್ ಬಾವಾ, ಹಮೀದ್ ಉಮರ್, ಸಿರಾಜ್ ಅಬ್ದುಲ್ ಖಾದರ್
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಇಸ್ಮಾಯಿಲ್ ಮೂಸಬ್ಬ ಅವರು, ಮೂಳೂರು ಜಮಾತ್ ವೆಲ್ಫೇರ್ ಫೋರಮ್ ನ ಎಲ್ಲಾ ಸದಸ್ಯರು ಸಂಸ್ಥೆಯ ಏಳಿಗೆಗೆ ಪ್ರೋತ್ಸಾಹಿಸಿದ್ದಾರೆ. ಇನ್ನುಮುಂದೆ ಇದೇ ತರದ ಪ್ರೋತ್ಸಾಹ, ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿದ್ದ ಗೌರವಾಧ್ಯಕ್ಷ ಹಾಗೂ ಸ್ಥಪಕಾಧ್ಯಕ್ಷರಾದ ಹಾಜಿ ಯೂಸುಫ್ ಉಮರ್ ಮಾತನಾಡಿ, ಮೂಳೂರು ಜಮಾತ್ ವೆಲ್ಫೇರ್ ಫೋರಮ್ ನ ಬಗ್ಗೆ ತಾವು ಸಾಧಿಸಿಕ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೂತನ ಕಾರ್ಯಕಾರಿ ಸಮಿತಿಯವರಿಗೆ ಶುಭ ಹಾರೈಸಿದರು.
ಸಭೆಯಲ್ಲಿ ಮೂಳೂರು ಜಮಾಅತ್ ವೆಲ್ಫೇರ್ ಫೋರಂನ ಡೆವಲಪ್ಮೆಂಟ್ ಚೇರ್ಮನ್ ಇಲ್ಯಾಸ್ ಉಮರ್ ಅವರು, ಸಂಸ್ಥೆಯ ಇತಿಹಾಸ, ಉದ್ದೇಶ ಹಾಗೂ ಸಾಧನೆಗಳ ಕುರಿತು ಪರಿಚಯಾತ್ಮಕ ಭಾಷಣ ಮಾಡಿದರು.
ಸಭೆಯಲ್ಲಿ ಗೌರವಾಧ್ಯಕ್ಷ ಎಂ.ಇ.ಮೂಳೂರು ಮೂಳೂರು ಜಮಾಅತ್ ವೆಲ್ಫೇರ್ ಫೋರಂನ ಕಾರ್ಯ-ವೈಖರಿಯನ್ನು ತಿಳಿಸಿ, ಸಂಸ್ಥೆಯ ಬೆಳವಣಿಗೆಗೆ ಪೂರಕವಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.
ಅಲ್ ಖಮರ್ ಅಧ್ಯಕ್ಷರಾದ ಎಂ.ಇ.ಉಸ್ಮಾನ್ ಮತ್ತು ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ತೋಟ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನಿರ್ಗಮಿತ ಅಧ್ಯಕ್ಷ ಸಿರಾಜ್ ಅಬ್ದುಲ್ ಖಾದರ್, ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರು ಮತ್ತು ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು.
ಅಬ್ದುಲ್ ಸಮದ್ ಬೀರಲಿ ಕಳೆದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಹಾಗೂ ಮುಖಂಡರ ಸಮ್ಮತಿಯೊಂದಿಗೆ ವರದಿಯನ್ನು ಅನುಮೋದಿಸಲಾಯಿತು.
ಖಜಾಂಚಿ ಇಸ್ಮಾಯಿಲ್ ಮೂಸಬ್ಬ ವಾರ್ಷಿಕ ಹಣಕಾಸು ವರದಿಯನ್ನು ಮಂಡಿಸಿದರು.
ಇಕ್ರಾಮ್ ಮೊಹಮ್ಮದ್ ಚುನಾವಣೆ ಅಧಿಕಾರಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮವು ಹಾಜಿ ಎಂ.ಇ. ಮೂಳೂರು ಅವರ ದುಆ ಹಾಗೂ ರಶೀದ್ ಇಸ್ಮಾಯಿಲ್ ಅವರ ಕಿರಾಅತ್ ನೊಂದಿಗೆ ಆರಂಭಗೊಂಡಿತು. ಅತಿಥಿಗಳನ್ನು ಮತ್ತು ಸದಸ್ಯರನ್ನು ಇಬ್ರಾಹಿಂ ಕಳತ್ತೂರ್ ಸ್ವಾಗತಿಸಿ, ವಂದಿಸಿದರು.