ಸಾಂದರ್ಭಿಕ ಚಿತ್ರ - Photo Credit : aljazeera.com

ದುಬೈ: ಪ್ರಾದೇಶಿಕ ಮಿಲಿಟರಿ ಚಟುವಟಿಕೆಗಳ ಸಮಯದಲ್ಲಿ ಉತ್ತರದ ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಹಲವು ವಾಣಿಜ್ಯ ನೌಕೆಗಳ ಮೇಲೆ ಕ್ಷಿಪಣಿ ಅಥವಾ ಗುಂಡಿನ ದಾಳಿ ನಡೆದಿದ್ದು, ಅವುಗಳು ಕಾರ್ಯನಿರ್ವಹಿಸಲಾರದ ಸ್ಥಿತಿಗೆ ತಲುಪಿವೆ ಎಂದು `ಯುನೈಟೆಡ್ ಕಿಂಗ್‍ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್'(ಯುಕೆಎಂಟಿಒ) ಬುಧವಾರ ತಿಳಿಸಿದೆ ಎಂದು ವರದಿಯಾಗಿದೆ.

ಈ ಘಟನೆಯಿಂದ ಆದ ಪ್ರಾಣಹಾನಿ ಅಥವಾ ಪರಿಸರದ ಮೇಲಿನ ಪ್ರಭಾವದ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲ.

ಯುನೈಟೆಡ್ ಅರಬ್ ಎಮಿರೇಟ್ಸ್‍ನ ಪೋರ್ಟ್ ರಶೀದ್‍ನಿಂದ ವಾಯುವ್ಯಕ್ಕೆ 24 ನೌಟಿಕಲ್ ಮೈಲಿ ದೂರದಲ್ಲಿ ಲಂಗರು ಹಾಕಲಾಗಿದ್ದ ಹಡಗೊಂದಕ್ಕೆ ಕ್ಷಿಪಣಿ ಬಡಿದ ನಂತರ ನೀರು ಒಳಹೋಗಿರುವ ಸಾಧ್ಯತೆಯಿದ್ದು, ಅದು ಒಂದು ಬದಿಗೆ ವಾಲಿರುವುದು ಕಂಡುಬಂದಿದೆ ಎಂದು ಎಂದು ಯುಕೆಎಂಟಿಒ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor