×
Ad

ತರಬೇತಿ ವೇಳೆ ಅವಘಡ: ಹಾವೇರಿ ಮೂಲದ ಯೋಧ ಕೇರಳದಲ್ಲಿ ಮೃತ್ಯು

Update: 2026-07-04 13:18 IST

ಹಾವೇರಿ: ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದ್ದ ತರಬೇತಿ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ನೌಕಾಪಡೆಯ ತರಬೇತಿಯಲ್ಲಿದ್ದ ಹಾವೇರಿ ಜಿಲ್ಲೆಯ ಯೋಧ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಹಾನಗಲ್ ತಾಲೂಕಿನ ಉಪ್ಪಣಸಿ ಗ್ರಾಮದ ಮೂಲದ ಯಶೋಧರ ವಡ್ಡರ (29) ಮೃತಪಟ್ಟ ಯೋಧ. 2016ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದ ಅವರು ಅಂಡಮಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಮೂರು ತಿಂಗಳಿಂದ ಕೊಚ್ಚಿಯಲ್ಲಿ ವಿಶೇಷ ತರಬೇತಿಯಲ್ಲಿ ಭಾಗವಹಿಸಿದ್ದ ಯಶೋಧರ ವಡ್ಡರ, ಶನಿವಾರ  ತರಬೇತಿ ವೇಳೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಯೋಧನ ಮೃತದೇಹವನ್ನು ಶನಿವಾರ ಮಂಗಳೂರು ಮಾರ್ಗವಾಗಿ ಹಾವೇರಿಗೆ ತರಲಾಗುತ್ತಿದೆ.

ಯೋಧನ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಉಪ್ಪಣಸಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಯಶೋಧರ ವಡ್ಡರ ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News